2030ರ ಕಾಮನ್ವೆಲ್ತ್ ಕ್ರೀಡಾಕೂಟ: ಆತಿಥ್ಯದ ಹಕ್ಕು ಪಡೆಯಲು ಭಾರತ ಸಜ್ಜು

ಸಾಂದರ್ಭಿಕ ಚಿತ್ರ | Photo Credit : NDTV
ಹೊಸದಿಲ್ಲಿ, ನ.25: ಗ್ಲಾಸ್ಗೊದಲ್ಲಿ ಬುಧವಾರ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಮಹಾಸಭೆಯಲ್ಲಿ 2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಭಾರತದ ಬಿಡ್ ಅನ್ನು ಔಪಚಾರಿಕವಾಗಿ ಅನುಮೋದಿಸಲಾಗುವುದು.
ಭಾರತವು ಕೊನೆಯ ಬಾರಿ 2010ರಲ್ಲಿ ಹೊಸದಿಲ್ಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಬಹು ಕ್ರೀಡಾಕೂಟವು ಈ ಬಾರಿ ಅಹ್ಮದಾಬಾದ್ ನಲ್ಲಿ ನಡೆಯಲಿದೆ.
ಕಾಮನ್ವೆಲ್ತ್ ಕ್ರೀಡಾ ಮಂಡಳಿಯು ಬಿಡ್ ಅನ್ನು ಶಿಫಾರಸು ಮಾಡಿದೆ ಹಾಗೂ ಕಾಮನ್ವೆಲ್ತ್ ಕ್ರೀಡಾ ಮೌಲ್ಯಮಾಪನ ಸಮಿತಿಯು ಇದನ್ನು ಮೇಲ್ವಿಚಾರಣೆ ಮಾಡಿದೆ.
2030ರ ಕಾಮನ್ವೆಲ್ತ್ ಕ್ರೀಡಾಕೂಟದ ಬಿಡ್ಗಾಗಿ ಭಾರತವು ನೈಜೀರಿಯಾದ ಅಬುಜಾ ನಗರದಿಂದ ಸ್ಪರ್ಧೆಯನ್ನು ಎದುರಿಸಿತು. 2034ರ ಆವೃತ್ತಿಗೆ ಆಫ್ರಿಕಾ ರಾಷ್ಟ್ರವನ್ನು ಪರಿಗಣಿಸಲು ನಿರ್ಧರಿಸಲಾಗಿದೆ.
2036ರಲ್ಲಿ ಒಲಿಂಪಿಕ್ ಗೇಮ್ಸ್ ಆತಿಥ್ಯವಹಿಸಿಕೊಳ್ಳುವ ಉತ್ಸಾಹದಲ್ಲಿರುವ ಭಾರತಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯದ ಹಕ್ಕನ್ನು ಪಡೆಯುವುದು ಮಹತ್ವದ ಮೈಲಿಗಲ್ಲಾಗಲಿದೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನು ಕೂಡ ಅಹ್ಮದಾಬಾದ್ ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.





