ಪೃಥ್ವಿರಾಜ್ ಗೆ 21ನೇ ಸ್ಥಾನ, ಫೈನಲ್ ತಲುಪಲು ವಿಫಲ

ಶೂಟರ್ ಪೃಥ್ವಿರಾಜ್ | PC : Olympics.com
ಪ್ಯಾರಿಸ್ : ಭಾರತೀಯ ಶೂಟರ್ ಪೃಥ್ವಿರಾಜ್ ಟೊಂಡೈಮನ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಂಗಳವಾರ ನಡೆದ ಪುರುಷರ ಟ್ರ್ಯಾಪ್ ಶೂಟಿಂಗ್ ನಲ್ಲಿ ಅಂತಿಮ 2 ಸುತ್ತುಗಳಲ್ಲಿ 25 ಅಂಕ ಗಳಿಸಿದ್ದರೂ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಲು ಈ ಸ್ಕೋರ್ ಸಾಕಾಗಲಿಲ್ಲ.
ಅರ್ಹತಾ ಸುತ್ತಿನ ಎಲ್ಲ 5 ಸುತ್ತುಗಳಲ್ಲಿ ಪೃಥ್ವಿರಾಜ್ 125ರಲ್ಲಿ 118 ಅಂಕ ಗಳಿಸಿದರು. ಫೈನಲ್ಸ್ ಗೆ ಸ್ಪರ್ಧೆಯಲ್ಲಿದ್ದ 30 ಶೂಟರ್ಗಳ ಪೈಕಿ ಪೃಥ್ವಿರಾಜ್ 21ನೇ ಸ್ಥಾನ ಪಡೆದರು. ಅಗ್ರ ಆರು ಶೂಟರ್ ಗಳು ಫೈನಲ್ ಗೆ ಅರ್ಹತೆ ಪಡೆಯುತ್ತಾರೆ.
ಸೋಮವಾರ ಮೊದಲ ದಿನದ ಅರ್ಹತಾ ಸುತ್ತಿನಲ್ಲಿ ಪೃಥ್ವಿರಾಜ್ ಒಟ್ಟು 68 ಸ್ಕೋರ್ ಗಳಿಸಿ 30ನೇ ಸ್ಥಾನ ಪಡೆದಿದ್ದರು.
ಮಹಿಳೆಯರ ಟ್ರ್ಯಾಪ್ ಶೂಟಿಂಗ್ ನ ಅರ್ಹತಾ ಸುತ್ತಿನ ಮೊದಲ ದಿನವಾದ ಮಂಗಳವಾರ ರಾಜೇಶ್ವರಿ ಕುಮಾರಿ 21ನೇ ಸ್ಥಾನ ಹಾಗೂ ಶ್ರೇಯಸಿ ಸಿಂಗ್ 22ನೇ ಸ್ಥಾನ ಪಡೆದರು. ಕೊನೆಯ 2 ಸುತ್ತುಗಳು ಬುಧವಾರ ನಡೆಯಲಿದೆ.
Next Story





