2ನೇ ಆ್ಯಶಸ್ ಟೆಸ್ಟ್: ಇಂಗ್ಲೆಂಡ್ 325 ರನ್ಗೆ ಆಲೌಟ್ ಆಸ್ಟ್ರೇಲಿಯಕ್ಕೆ ಇನಿಂಗ್ಸ್ ಮುನ್ನಡೆ

ಲಾರ್ಡ್ಸ್: ದ್ವಿತೀಯ ಆ್ಯಶಸ್ ಟೆಸ್ಟ್ನ ಮೂರನೇ ದಿನವಾದ ಶುಕ್ರವಾರ ತನ್ನ ಪ್ರಾಬಲ್ಯ ವನ್ನು ಮುಂದುವರಿಸಿದ ಆಸ್ಟ್ರೇಲಿಯವು ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 325 ರನ್ಗೆ ಕಟ್ಟಿಹಾಕಿ 91 ರನ್ ಇನಿಂಗ್ಸ್ ಮುನ್ನಡೆ ಪಡೆದಿದೆ.
ಇಂಗ್ಲೆಂಡ್ ತಂಡ ನಿನ್ನೆಯ ಸ್ಕೋರ್ಗೆ ಕೇವಲ 47 ರನ್ ಸೇರಿಸುವಷ್ಟರಲ್ಲಿ ಉಳಿದಿರುವ ಆರು ವಿಕೆಟ್ಗಳನ್ನು ಕಳೆದುಕೊಂಡಿತು. ಆಸ್ಟ್ರೇಲಿಯ ಗಿಂತ 91 ರನ್ ಹಿನ್ನಡೆ ಅನುಭವಿಸಿತು.
2ನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ 45.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಒಟ್ಟು 221 ರನ್ ಮುನ್ನಡೆಯಲ್ಲಿದೆ. ಉಸ್ಮಾನ್ ಖ್ವಾಜಾ(ಔಟಾಗದೆ 58) ಹಾಗೂ ಸ್ಟೀವ್ ಸ್ಮಿತ್(ಔಟಾಗದೆ 6) ಕ್ರೀಸ್ ಕಾಯ್ದುಕೊಂಡಿದ್ದಾರೆ. ಲ್ಯಾಬುಶೇನ್(30 ರನ್)ಹಾಗೂ ಡೇವಿಡ್ ವಾರ್ನರ್(25 ರನ್)ವಿಕೆಟ್ ಒಪ್ಪಿಸಿದ್ದಾರೆ.
ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮೊತ್ತ 416 ರನ್ಗೆ ಉತ್ತರಿಸಹೊರಟ ಇಂಗ್ಲೆಂಡ್ ಶುಕ್ರವಾರ 4 ವಿಕೆಟ್ ನಷ್ಟಕ್ಕೆ 278 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು. ಆದರೆ ಇಂಗ್ಲೆಂಡ್ ಬ್ಯಾಟಿಂಗ್ ಕುಸಿತಕ್ಕೆ ಒಳಗಾ ಯಿತು. ತಂಡದ ನಾಯಕ ಬೆನ್ ಸ್ಟೋಕ್ಸ್ (17 ರನ್) ಬೇಗನೆ ಔಟಾದರು. ಸ್ಟೋಕ್ಸ್ ಅವರು ಮಿಚೆಲ್ ಸ್ಟಾರ್ಕ್(3-88) ಬೌಲಿಂಗ್ನಲ್ಲಿ ಕ್ಯಾಮರೂನ್ ಗ್ರೀನ್ಗೆ ವಿಕೆಟ್ ಒಪ್ಪಿಸಿದರು.
ಹ್ಯಾರಿ ಬ್ರೂಕ್ ನಿನ್ನೆಯ ಸ್ಕೋರ್ಗೆ ಕೇವಲ ೫ ರನ್ ಸೇರಿಸಿದರು. ಆ್ಯಶಸ್ ಕ್ರಿಕೆಟ್ನಲ್ಲಿ ತನ್ನ ಮೊದಲ ಅರ್ಧಶತಕ ಗಳಿಸಿದ ತಕ್ಷಣ ಸ್ಟಾರ್ಕ್ ಎಸೆದ ಚೆಂಡನ್ನು ಕೆಣಕಲು ಹೋಗಿ ಪ್ಯಾಟ್ ಕಮಿನ್ಸ್ಗೆ ಸುಲಭ ಕ್ಯಾಚ್ ನೀಡಿದರು. ಬೈರ್ಸ್ಟೋವ್(16 ರನ್) ಅವರು ಹೇಝಲ್ವುಡ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು.
ಸ್ಟುವರ್ಟ್ ಬ್ರಾಡ್(12 ರನ್), ಒಲಿ ರಾಬಿನ್ಸನ್ (9ರನ್) ಹಾಗೂ ಜೋಶ್ ಟಾಂಗೆ (1 ರನ್) ಆಸ್ಟ್ರೇಲಿಯದ ಬೌಲರ್ಗಳನ್ನು ಎದು ರಿಸುವಲ್ಲಿ ವಿಫಲರಾದರು. ಪಾರ್ಟ್ ಟೈಮ್ ಸ್ಪಿನ್ನರ್ ಟ್ರಾವಿಸ್ ಹೆಡ್(2-17) ಇಂಗ್ಲೆಂಡ್ ಇನಿಂಗ್ಸ್ ಅಂತ್ಯದಲ್ಲಿ ಎರಡು ವಿಕೆಟ್ ಪಡೆಯು ವಲ್ಲಿ ಯಶಸ್ವಿಯಾದರು.
ಆಸ್ಟ್ರೇಲಿಯದ ಪರ ಸ್ಟಾರ್ಕ್(3-88)ಯಶಸ್ವಿ ಬೌಲರ್ ಎನಿಸಿಕೊಂಡರು. ಹೇಝಲ್ವುಡ್(2-71) ಹಾಗೂ ಹೆಡ್(2-17) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.