ದ್ವಿತೀಯ ಟ್ವೆಂಟಿ-20: ಭಾರತ ವಿರುದ್ಧ ವೆಸ್ಟ್ಇಂಡೀಸ್ಗೆ ಸತತ 2ನೇ ಜಯ
ಪೂರನ್ 67 ರನ್ , ತಿಲಕ್ ವರ್ಮಾ ಚೊಚ್ಚಲ ಅರ್ಧಶತಕ ವ್ಯರ್ಥ

Photo | twitter: @ICC
ಗಯಾನ: ವಿಕೆಟ್ಕೀಪರ್-ಬ್ಯಾಟರ್ ನಿಕೊಲಸ್ ಪೂರನ್ (67ರನ್, 40 ಎಸೆತ, 6 ಬೌಂಡರಿ,4 ಸಿಕ್ಸರ್) ಅರ್ಧಶತಕ, ಬಾಲಂಗೋಚಿಗಳಾದ ಅಕೀಲ್ ಹುಸೇನ್(ಔಟಾಗದೆ 16) ಹಾಗೂ ಅಲ್ಝಾರಿ ಜೋಸೆಫ್(ಔಟಾಗದೆ 10) ದಿಟ್ಟ ಹೋರಾಟದ ನೆರವಿನಿಂದ ಆತಿಥೇಯ ವೆಸ್ಟ್ಇಂಡೀಸ್ ತಂಡ ದ್ವಿತೀಯ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 2 ವಿಕೆಟ್ ಅಂತರದಿಂದ ರೋಚಕ ಜಯ ಸಾಧಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
ಗೆಲ್ಲಲು 153 ರನ್ ಗುರಿ ಪಡೆದ ವಿಂಡೀಸ್ 18.5 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಶಿಮ್ರೆನ್ ಹೆಟ್ಮೆಯರ್(22 ರನ್)ಹಾಗೂ ರೋವ್ಮನ್ ಪೊವೆಲ್(21 ರನ್, 19 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ (3-35) ಯಶಸ್ವಿ ಪ್ರದರ್ಶನ ನೀಡಿದರು. ಯಜುವೇಂದ್ರ ಚಹಾಲ್(2-19)2 ವಿಕೆಟ್ ಪಡೆದರೆ, ಮುಕೇಶ ಕುಮಾರ್(1-35) ಹಾಗೂ ಅರ್ಷದೀಪ್ ಸಿಂಗ್(1-34) ತಲಾ ಒಂದು ವಿಕೆಟ್ ಪಡೆದರು.
ಗೆಲುವಿನ ವಿಶ್ವಾಸದಲ್ಲಿದ್ದ ವಿಂಡೀಸ್ 11 ಎಸೆತಗಳಲ್ಲಿ 2 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಆಗ 9ನೆ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 26 ರನ್ ಸೇರಿಸಿದ ಹುಸೇನ್ ಹಾಗೂ ಜೋಸೆಫ್ 7 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.
ವಿಂಡೀಸ್ 2016ರ ನಂತರ ಮೊದಲ ಬಾರಿ ಭಾರತ ವಿರುದ್ಧ ಸತತ 2 ಟಿ-20 ಪಂದ್ಯವನ್ನು ಜಯಿಸಿತು.
ಭಾರತ 152/7: ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ಕ್ರಿಕೆಟ್ ತಂಡ ಮಧ್ಯಮ ಸರದಿಯ ಬ್ಯಾಟರ್ ತಿಲಕ್ ವರ್ಮಾ ಗಳಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 152 ರನ್ ಗಳಿಸಿತು.