ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್: ವಿರಾಟ್ ಕೊಹ್ಲಿ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ | Photo: PTI
ಧರ್ಮಶಾಲಾ: ಭಾರತದ ಯುವ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭವಾದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ವಿರಾಟ್ ಕೊಹ್ಲಿ ದಾಖಲೆಗಳನ್ನು(655 ರನ್, 692 ರನ್)ಯನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ 2016-17ರಲ್ಲಿ ಭಾರತದ ನೆಲದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿಯೇ ಒಟ್ಟು 655 ರನ್ ಗಳಿಸಿದ್ದರು. ಆ ನಂತರ 2014-15ರಲ್ಲಿ ಆಸ್ಟ್ರೇಲಿಯದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ ಸರಣಿಯಲ್ಲಿ ಕೊಹ್ಲಿ 692 ರನ್ ಗಳಿಸಿದ್ದರು. 5ನೇ ಟೆಸ್ಟ್ ಪಂದ್ಯದಲ್ಲಿ 57 ರನ್(58 ಎಸೆತ)ಗಳಿಸಿರುವ ಜೈಸ್ವಾಲ್ ಅವರು ಕೊಹ್ಲಿ ಎರಡು ಪ್ರತ್ಯೇಕ ಸಂದರ್ಭದಲ್ಲಿ ನಿರ್ಮಿಸಿರುವ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದಾರೆ.
ಪ್ರಸಕ್ತ ಐದು ಪಂದ್ಯಗಳ ಸರಣಿಯಲ್ಲಿ ಒಟ್ಟು 712 ರನ್ ಗಳಿಸಿರುವ ಮುಂಬೈನ ಯುವ ಬ್ಯಾಟರ್ ಜೈಸ್ವಾಲ್ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಆಗಿರುವ ಸುನೀಲ್ ಗವಾಸ್ಕರ್ ದಾಖಲೆಯನ್ನು(774 ರನ್)ಮುರಿಯುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಯಶಸ್ವಿ ಜೈಸ್ವಾಲ್ ವೇಗವಾಗಿ 1000 ಟೆಸ್ಟ್ ರನ್ ಪೂರೈಸಿದ ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು. 22ರ ಹರೆಯದ ಜೈಸ್ವಾಲ್ ತನ್ನ 16ನೇ ಇನಿಂಗ್ಸ್ ನಲ್ಲಿ ಸಾವಿರ ರನ್ ಪೂರೈಸಿದರು. ವಿನೋದ್ ಕಾಂಬ್ಳಿ 14 ಇನಿಂಗ್ಸ್ ಗಳಲ್ಲಿ ತನ್ನ ಮೊದಲ 1, 000 ರನ್ ಗಳಿಸಿದ್ದರು.
ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರರು
ಸುನೀಲ್ ಗವಾಸ್ಕರ್-774 ರನ್, 1970-71ರಲ್ಲಿ ವೆಸ್ಟ್ಇಂಡೀಸ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ
ಸುನೀಲ್ ಗವಾಸ್ಕರ್-732 ರನ್, 1978-79ರಲ್ಲಿ ಭಾರತದಲ್ಲಿ ವೆಸ್ಟ್ಇಂಡೀಸ್ ವಿರುದ್ಧ
ವಿರಾಟ್ ಕೊಹ್ಲಿ-692 ರನ್,2014-15ರಲ್ಲಿ ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯ ವಿರುದ್ಧ
ಯಶಸ್ವಿ ಜೈಸ್ವಾಲ್-712 ರನ್, 2024ರಲ್ಲಿ ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ
ವಿರಾಟ್ ಕೊಹ್ಲಿ-655 ರನ್, 2016-17ರಲ್ಲಿ ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ.







