ಆರು ಇನಿಂಗ್ಸ್ಗಳಲ್ಲಿ 834 ರನ್: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚಿನ್ಮಯ್ ಸುತಾರ್ ಚಾರಿತ್ರಿಕ ಸಾಧನೆ

ಚಿನ್ಮಯ್ ಸುತಾರ್ | Photo Credit : PTI
ಮುಂಬೈ: ಅಜೇಯ 400 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದ ಕೆಲವೇ ದಿನಗಳ ನಂತರ ಚಿನ್ಮಯ್ ಸುತಾರ್ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿನ ತನ್ನ ಅಸಾಮಾನ್ಯ ಆರಂಭಕ್ಕೆ ಮತ್ತೊಂದು ಮೈಲಿಗಲ್ಲು ತಲುಪಿದರು.
ರಣಜಿ ಟ್ರೋಫಿ ಪ್ಲೇ ಗ್ರೂಪ್ನಲ್ಲಿ ಮಿರೆರಾಂ ತಂಡವನ್ನು ಪ್ರತಿನಿಧಿಸುತ್ತಿರುವ 23ರ ವಯಸ್ಸಿನ ಸುತಾರ್ ಬುಧವಾರ ಪ್ರಥಮ ದರ್ಜೆ ಕ್ರಿಕೆಟ್ನ ಆರು ಇನಿಂಗ್ಸ್ಗಳಲ್ಲಿ ಗರಿಷ್ಠ ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಮುರಿದರು.
ಆನಂದ್ನಲ್ಲಿ ನಡೆದಿದ್ದ ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ 175 ರನ್ ಗಳಿಸಿದ್ದ ಸುತಾರ್ ಒಟ್ಟು 834 ರನ್ ಗಳಿಸಿದರು. ಅಫ್ಘಾನಿಸ್ತಾನದ ಬಶೀರ್ ಶಾ ನಿರ್ಮಿಸಿದ್ದ ಹಿಂದಿನ ದಾಖಲೆ(831 ರನ್)ಮುರಿದರು.
‘‘ರನ್ ಗಳಿಸುವ ಜೊತೆ ವಿಶ್ವ ದಾಖಲೆ ನಿರ್ಮಿಸಿದ್ದ ನನಗೆ ತುಂಬಾ ಖುಷಿಯಾಗುತ್ತಿದೆ. ಮುಂಬೈ ಕ್ರಿಕೆಟ್ನ ಆರಂಭಿಕ ವರ್ಷಗಳಲ್ಲಿ ಕಲಿತಿರುವುದನ್ನು ಇಲ್ಲಿ ತೋರ್ಪಡಿಸಿದ್ದೇನೆ. ಉತ್ತಮ ಫಾರ್ಮ್ನಲ್ಲಿರುವಾಗ ಸಾಧ್ಯವಾದಷ್ಟು ರನ್ ಗಳಿಸಬೇಕು’’ ಎಂದು ಸುತಾರ್ ಹೇಳಿದ್ದಾರೆ.




