ಕೋಲ್ಕತಾದ ಈಡನ್ ಗಾರ್ಡನ್ಸ್ ಡ್ರೆಸ್ಸಿಂಗ್ ರೂಮ್ ನಲ್ಲಿ ಬೆಂಕಿ ಅವಘಡ

Photo Source: Twitter | ಸಾಂದರ್ಭಿಕ ಚಿತ್ರ
ಕೋಲ್ಕತಾ: ಐಸಿಸಿ ಏಕದಿನ ವಿಶ್ವಕಪ್-2023 ಮುಂಚಿತವಾಗಿ ನವೀಕರಣಕಾರ್ಯ ನಡೆಯುತ್ತಿದ್ದ ಕೋಲ್ಕತಾದ ಈಡನ್ ಗಾರ್ಡನ್ಸ್ ಸ್ಟೇಡಿಯಮ್ ನ ಡ್ರೆಸ್ಸಿಂಗ್ ರೂಮ್ನಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ.
ವರದಿಯ ಪ್ರಕಾರ ಡ್ರೆಸ್ಸಿಂಗ್ ರೂಮ್ನ ಫಾಲ್ಸ್ ಸೀಲಿಂಗ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ದೊಡ್ಡ ಮಟ್ಟಿನ ಹಾನಿಯಾಗಿಲ್ಲ. ಆದರೆ ಕೊಠಡಿಯಲ್ಲಿದ್ದ ಆಟಗಾರರ ಕಿಟ್ಗಳು ಹಾಗೂ ಸಲಕರಣೆಗಳು ಸುಟ್ಟು ಭಸ್ಮವಾಗಿವೆ.
ನವೀಕರಣ ಕಾರ್ಯದಲ್ಲಿ ತೊಡಗಿದ್ದ ಜನರು ತಕ್ಷಣವೇ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ದಳ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಎರಡು ಅಗ್ನಿಶಾಮಕ ಯಂತ್ರಗಳನ್ನು ಬಳಸಲಾಗಿದೆ.
ಮುಂಬರುವ ವಿಶ್ವಕಪ್ನಲ್ಲಿ ಈಡನ್ಗಾರ್ಡನ್ಸ್ ಸ್ಟೇಡಿಯಮ್ ಐದು ಪಂದ್ಯಗಳ ಆತಿಥ್ಯವನ್ನು ವಹಿಸಲಿದೆ.
ಈಡನ್ಗಾರ್ಡನ್ ನಲ್ಲಿ ಪಾಕಿಸ್ತಾನ ತಂಡವು ಎರಡು ಪಂದ್ಯಗಳನ್ನು ಅಡಲಿವೆ. ಅಕ್ಟೋಬರ್ 31 ರಂದು ಬಾಂಗ್ಲಾದೇಶವನ್ನು ಹಾಗೂ ನವೆಂಬರ್ 11ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ನ.11 ರ ಪಂದ್ಯವು ಟೂರ್ನಮೆಂಟ್ ನ ಕೊನೆಯ ಲೀಗ್ ಪಂದ್ಯವಾಗಿದೆ. ಒಂದು ವೇಳೆ ಪಾಕಿಸ್ತಾನ ಸೆಮಿ ಫೈನಲ್ ಗೆ ಅರ್ಹತೆ ಪಡೆದರೆ ಕೋಲ್ಕತಾದಲ್ಲಿ ಮತ್ತೊಮ್ಮೆ ಆಡಲಿವೆ.
ಕೋಲ್ಕತಾವು ನೆದರ್ಲ್ಯಾಂಡ್ಸ್-ಬಾಂಗ್ಲಾದೇಶ(ಅ.28) ಹಾಗೂ ಭಾರತ-ದಕ್ಷಿಣ ಆಫ್ರಿಕಾ(ನವೆಂಬರ್ 5)ನಡುವಿನ ಪಂದ್ಯದ ಆತಿಥ್ಯವನ್ನು ವಹಿಸಲಿದೆ.