ಕನಿಷ್ಠ ಎಸೆತಗಳಲ್ಲಿ ಗರಿಷ್ಠ ಅರ್ಧಶತಕ: ಅಭಿಷೇಕ್ ಶರ್ಮಾ ವಿಶ್ವದಾಖಲೆ

ನಾಗ್ಪುರ: ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಬಿರುಸಿನ ಹೊಡೆತಗಳಿಗೆ ಹೆಸರುವಾಸಿಯಾದ ಎಡಗೈ ಬ್ಯಾಟ್ಸ್ಮನ್ ಆರಂಭದಿಂದಲೇ ನ್ಯೂಝಿಲೆಂಡ್ ಬೌಲರ್‌ಗಳನ್ನು ದಂಡಿಸಿದರು.
ಕೇವಲ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ಶರ್ಮಾ ಈ ಮೈಲುಗಲ್ಲು ಸಾಧನೆ ಮಾಡಿದರು. ಈ ಮೂಲಕ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 8 ಟಿ20 ಅರ್ಧಶತಕಗಳನ್ನು ಸಾಧಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಇದಕ್ಕೂ ಮುನ್ನ ಸಹ ಆಟಗಾರ ಸೂರ್ಯಕುಮಾರ್ ಯಾದವ್, ಫಿಲ್ ಸಾಲ್ಟ್ ಮತ್ತು ಇವೀಸ್ ಲೆವಿಸ್ 25ಕ್ಕಿಂತ ಕಡಿಮೆ ಎಸೆತಗಳಲ್ಲಿ 7 ಅರ್ಧಶತಕಗಳನ್ನು ಸಾಧಿಸಿದ್ದರು.
ಇದು ನ್ಯೂಝಿಲೆಂಡ್ ತಂಡದ ವಿರುದ್ಧ ಭಾರತ ಅತ್ಯಂತ ಕಡಿಮೆ ಎಸೆತಗಳಲ್ಲಿ ಗಳಿಸಿದ ಅರ್ಧಶತಕವೂ ಆಗಿದೆ. ಇದಕ್ಕೂ ಮುನ್ನ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
Next Story





