ACC Men’s Asia Cup Rising Stars 2026 | ತಿಲಕ್ ವರ್ಮಾ ಶತಕ ವ್ಯರ್ಥ; ಪಾಕಿಸ್ತಾನ 'A'ಗೆ 48 ರನ್ ಗಳ ಜಯ
ಭಾರತ 'A' 265 ರನ್ ಗಳಿಗೆ ಆಲೌಟ್

Photo: x.com/ITGDsports
ದೋಹಾ: ACC ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಪಂದ್ಯದಲ್ಲಿ ಪಾಕಿಸ್ತಾನ 'ಎ' ತಂಡವು ಭಾರತ 'ಎ' ವಿರುದ್ಧ 48 ರನ್ ಗಳ ಜಯ ಸಾಧಿಸಿದೆ.
314 ರನ್ ಗಳ ಗುರಿ ಬೆನ್ನಟ್ಟಿದ ಭಾರತ 'ಎ' ತಂಡವು 49.1 ಓವರ್ ಗಳಲ್ಲಿ 265 ರನ್ ಗಳಿಗೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ 42 ಎಸೆತಗಳಲ್ಲಿ 70 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ತಿಲಕ್ ವರ್ಮಾ 149 ಎಸೆತಗಳಲ್ಲಿ 100 ರನ್ ಗಳಿಸಿ ಶತಕ ಸಿಡಿಸಿದರೆ, ಶಹಬಾಝ್ ಅಹ್ಮದ್ 49 ಎಸೆತಗಳಲ್ಲಿ 56 ರನ್ ಗಳಿಸಿದರು. ತಿಲಕ್ ಮತ್ತು ಶಹಬಾಝ್ ಏಳನೇ ವಿಕೆಟ್ ಗೆ 112 ರನ್ಗಳ ಜೊತೆಯಾಟ ನಡೆಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 'ಎ' ತಂಡವು 49.2 ಓವರ್ ಗಳಲ್ಲಿ 313 ರನ್ ಗಳಿಸಿ ಆಲೌಟ್ ಆಯಿತು. ಹಸನ್ ನವಾಝ್ 79 ರನ್ ಹಾಗೂ ಫರ್ಹಾನ್ ಯೂಸುಫ್ 56 ರನ್ ಗಳಿಸಿದರು. ಭಾರತ ಪರ ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ಪಾಕಿಸ್ತಾನ ಪರ ಹಸನ್ ನವಾಝ್ ಮತ್ತು ಅಲಿ ರಝಾ ತಲಾ ಮೂರು ವಿಕೆಟ್ ಕಬಳಿಸಿದರು.
ಈ ಗೆಲುವಿನೊಂದಿಗೆ ಪಾಕಿಸ್ತಾನ 'ಎ' ತಂಡವು ಸೆಮಿಫೈನಲ್ ಪ್ರವೇಶದತ್ತ ಮುನ್ನಡೆದಿದೆ. ಭಾರತ 'ಎ' ತಂಡವು ನ.24ರಂದು UAE ವಿರುದ್ಧ ತನ್ನ ಕೊನೆಯ ಗುಂಪು ಪಂದ್ಯ ಆಡಲಿದ್ದು, ಗೆಲುವು ಸಾಧಿಸಿದರೆ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿದೆ.







