2026ರ ಆವೃತ್ತಿಯ ಏಶ್ಯನ್ ಗೇಮ್ಸ್ | ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಪ್ರಕಟ

Photo: ACB
ಕಾಬೂಲ್, ಆ.17: ಜಪಾನಿನಲ್ಲಿ ಸೆಪ್ಟಂಬರ್ 19ರಿಂದ ಅಕ್ಟೋಬರ್ 4ರ ತನಕ ನಡೆಯಲಿರುವ 2026ರ ಆವೃತ್ತಿಯ ಏಶ್ಯನ್ ಗೇಮ್ಸ್ಗೆ ಪುರುಷರ ಕ್ರಿಕೆಟ್ ಪಂದ್ಯಾವಳಿಗಾಗಿ ಅಫ್ಘಾನಿಸ್ತಾನವು 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಗೇಮ್ಸ್ನಲ್ಲಿ ಅಫ್ಘಾನಿಸ್ತಾನದ ಯುವ ತಂಡವನ್ನು ದರ್ವಿಶ್ ರಸೂಲಿ ನಾಯಕನಾಗಿ ಮುನ್ನಡೆಸಲಿದ್ದಾರೆ. ತಂಡದಲ್ಲಿ ಸ್ಟಾರ್ ಆಟಗಾರರಾದ ರಶೀದ್ ಖಾನ್, ಮುಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಝ್ ಅವರ ಅನುಪಸ್ಥಿತಿಯಿದೆ.
ಅಫ್ಘಾನ್ ತಂಡವು ಆತಿಥೇಯ ಜಪಾನ್ ಹಾಗೂ ನೇಪಾಳ ತಂಡದೊಂದಿಗೆ ‘ಎ’ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೇರಲಿವೆ.
ಭಾರತ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಕ್ವಾರ್ಟರ್ ಫೈನಲ್ ಸುತ್ತಿಗೆ ನೇರ ಪ್ರವೇಶ ಪಡೆದಿವೆ.
ಅಫ್ಘಾನಿಸ್ತಾನ ತಂಡದಲ್ಲಿ ರಾಷ್ಟ್ರೀಯ ತಂಡದ ಕೆಲವು ಖಾಯಂ ಆಟಗಾರರಾದ ಕರೀಂ ಜನತ್, ನಂಗ್ಯಾಲ್ ಖರೋತಿ ಹಾಗೂ ನಬಿ ಅವರ ಪುತ್ರ ಹಸನ್ ಇಸಾಖಿಲ್ ಅವರಿದ್ದಾರೆ.
Next Story




