ಪ್ರೊ ಕಬಡ್ಡಿ ಲೀಗ್: ಪಾಟ್ನಾ ವಿರುದ್ಧ ಜೈಪುರಕ್ಕೆ ರೋಚಕ ಜಯ

Photo Credit: X/@ProKabaddi
ಪುಣೆ: ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 29-28 ಅಂಕದಿಂದ ರೋಚಕ ಜಯ ಸಾಧಿಸಿದೆ.
ಬಾಲೆವಾಡಿ ಕ್ರೀಡಾ ಸಂಕೀರ್ಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಜೈಪುರದ ಪರ ವಿ.ಅಜಿತ್ ಕುಮಾರ್ 16 ಅಂಕ ಗಳಿಸಿ ಗೆಲುವಿನ ರೂವಾರಿಯಾದರು. ಪರಾಜಿತ ಪಾಟ್ನಾ ಪರ ಸಚಿನ್ ಹಾಗೂ ಸಂದೀಪ್ ತಲಾ 7 ಅಂಕ ಗಳಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡ ತಮಿಳ್ ತಲೈವಾಸ್ ತಂಡವನ್ನು 46-33 ಅಂಕದಿಂದ ಸೋಲಿಸಿದೆ.
ಮುಂಬಾ ಪರ ಗುಮನ್ ಸಿಂಗ್(11) ಹಾಗೂ ಅಮಿರ್ ಮುಹಮ್ಮದ್(10) ಗರಿಷ್ಠ ಅಂಕ ಗಳಿಸಿದರು
Next Story





