ಇಂಗ್ಲೆಂಡ್-ಭಾರತ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಹಾಜರಾಗದ ಆ್ಯಂಡರ್ಸನ್, ತೆಂಡುಲ್ಕರ್!

Anderson-Tendulkar Trophy | PTI
ಲಂಡನ್, ಆ.5: ಭಾರತ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸಕ್ಕೆ ಸಚಿನ್ ತೆಂಡುಲ್ಕರ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಹೆಸರಿನಲ್ಲಿ ಟ್ರೋಫಿ ನೀಡಲಾಗುತ್ತಿದ್ದು, ದ ಓವಲ್ ನಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಇಬ್ಬರು ದಿಗ್ಗಜರು ಗೈರು ಹಾಜರಾಗಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮೌನಕ್ಕೆ ಶರಣಾಗಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯು 2-2ರಿಂದ ಸಮಬಲದಲ್ಲಿ ಅಂತ್ಯಗೊಂಡ ನಂತರ ಬೆನ್ ಸ್ಟೋಕ್ಸ್ ಹಾಗೂ ಶುಭಮನ್ ಗಿಲ್ ಅವರು ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ.
ಸರಣಿ ಆರಂಭಕ್ಕೂ ಮೊದಲೇ ಇಸಿಬಿ, ಪಟೌಡಿ ಟ್ರೋಫಿಯ ಮರು ನಾಮಕರಣಕ್ಕೆ ನಿರ್ಧರಿಸಿತ್ತು. ಆಧುನಿಕ ಯುಗದ ಇಬ್ಬರು ದಿಗ್ಗಜ ಆಟಗಾರರ ಹೆಸರನ್ನು ಟ್ರೋಫಿಗೆ ಇಡಲು ಮುಂದಾಯಿತು. ಭಾರತ ತಂಡವು 2007ರಲ್ಲಿ ಮಾತ್ರ ಪಟೌಡಿ ಟ್ರೋಫಿಯನ್ನು ಗೆದ್ದಿತ್ತು. ಆಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಆಗಿನ ನಾಯಕ ರಾಹುಲ್ ದ್ರಾವಿಡ್ ಗೆ ಪ್ರಶಸ್ತಿ ಪ್ರದಾನಿಸಿದ್ದರು.
ಜೂನ್ ನಲ್ಲಿ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಆ್ಯಂಡರ್ಸನ್ ಹಾಗೂ ತೆಂಡುಲ್ಕರ್ ಇಬ್ಬರೂ ಹಾಜರಿದ್ದರು.





