ಒಂದೇ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವೈಯಕ್ತಿಕ ಶತಕಗಳು | 1955ರ ಟೆಸ್ಟ್ ಸರಣಿಯ ದಾಖಲೆ ಸರಿಗಟ್ಟಿದ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿ

PC : ICC
ಲಂಡನ್, ಆ.4: ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ತಂಡಗಳ ನಡುವೆ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 21 ವೈಯಕ್ತಿಕ ಶತಕಗಳು ದಾಖಲಾಗಿವೆ. ಈ ಮೂಲಕ 1955ರಲ್ಲಿ ಆಸ್ಟ್ರೇಲಿಯ ಹಾಗೂ ವೆಸ್ಟ್ಇಂಡೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಶತಕಗಳ ದಾಖಲೆ ಸರಿಗಟ್ಟಲಾಗಿದೆ.
ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರೊಬ್ಬರೇ ಪ್ರಸಕ್ತ ಸರಣಿಯಲ್ಲಿ ಒಟ್ಟು 4 ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಜೋ ರೂಟ್ ಮೂರು ಶತಕಗಳನ್ನು ಗಳಿಸಿದ್ದಾರೆ. ಕೆ.ಎಲ್.ರಾಹುಲ್, ಹ್ಯಾರಿ ಬ್ರೂಕ್, ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ ಎರಡು ಶತಕಗಳನ್ನು ಸಿಡಿಸಿದ್ದಾರೆ. ಅದೇ ವೇಳೆ, ಬೆನ್ ಡಕೆಟ್, ಜಮೀ ಸ್ಮಿತ್, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಬೆನ್ ಸ್ಟೋಕ್ಸ್ ಹಾಗೂ ಓಲಿ ಪೋಪ್ ತಲಾ ಒಂದು ಶತಕ ದಾಖಲಿಸಿದ್ದಾರೆ.
ಸರಣಿಯಲ್ಲಿನ 21 ಶತಕಗಳ ಪೈಕಿ 12 ಶತಕಗಳನ್ನು ಭಾರತೀಯ ಬ್ಯಾಟರ್ ಗಳು ಬಾರಿಸಿದ್ದಾರೆ. ಆತಿಥೇಯ ತಂಡದ ಬ್ಯಾಟರ್ ಗಳು 9 ಶತಕಗಳನ್ನು ಗಳಿಸಿದ್ದಾರೆ.





