IPL 2026 | ಆ್ಯಂಡ್ರೆ ರಸೆಲ್ ಕೈಬಿಟ್ಟ ಕೆಕೆಆರ್

ಆ್ಯಂಡ್ರೆ ರಸೆಲ್ | Photo Credit : PTI
ಕೋಲ್ಕತಾ, ನ.15: ಮುಂಬರುವ 2026ರ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗಿಂತ ಮೊದಲು ಕೋಲ್ಕತಾ ನೈಟ್ ರೈಡರ್ಸ್ ತಂಡವು ವೆಸ್ಟ್ಇಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ರನ್ನು ಬಿಡುಗಡೆಗೊಳಿಸಿದೆ.
ರಸೆಲ್ ದೀರ್ಘ ಸಮಯದಿಂದ ಕೆಕೆಆರ್ ತಂಡದೊಂದಿಗಿದ್ದಾರೆ. ಈ ತಂಡದಲ್ಲಿ 133 ಪಂದ್ಯಗಳನ್ನು ಆಡಿದ್ದು, 2014 ಹಾಗೂ 2024ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದರು.
37ರ ವಯಸ್ಸಿನ ರಸೆಲ್ ಕಳೆದ ವರ್ಷ ಮೆಗಾ ಹರಾಜಿಗಿಂತ ಮೊದಲು 12 ಕೋ.ರೂ.ಗೆ ಕೆಕೆಆರ್ ತಂಡದಲ್ಲಿ ಉಳಿದುಕೊಂಡಿದ್ದರು. ಆದರೆ 2025ರ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಕಾರಣ ರಸೆಲ್ ರನ್ನು ಕೈಬಿಡಲು ನಿರ್ಧರಿಸಿದೆ.
ರಸೆಲ್ 2025ರ ಋತುವಿನಲ್ಲಿ 13 ಇನಿಂಗ್ಸ್ಗಳಲ್ಲಿ ಕೇವಲ 167 ರನ್ ಗಳಿಸಿದ್ದು, ಪ್ರತೀ ಓವರ್ ಗೆ 12 ರನ್ನಂತೆ ಕೇವಲ 8 ವಿಕೆಟ್ಗಳನ್ನು ಕಬಳಿಸಿದ್ದಾರೆ.
Next Story





