ಇಂಗ್ಲೆಂಡ್ ಆಡುವ 11 ರ ಬಳಗದಿಂದ ಆರ್ಚರ್, ಪೋಪ್ ಹೊರಗೆ

ಜೋಫ್ರಾ ಆರ್ಚರ್ | Photo Credit : PTI
ಮೆಲ್ಬರ್ನ್, ಡಿ. 24: ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಗೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ತಂಡವನ್ನು ಪ್ರಕಟಿಸಿದೆ. ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಕೂಡ ಆಗಿರುವ ಈ ಪಂದ್ಯವು ಡಿಸೆಂಬರ್ 26ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದೆ.
ಪ್ರವಾಸಿ ತಂಡವು ತನ್ನ ಆಡುವ ಹನ್ನೊಂದರ ಬಳಗಕ್ಕೆ ಎರಡು ಬದಲಾವಣೆಗಳನ್ನು ಮಾಡಿದೆ. ಗಾಯಾಳು ಜೋಫ್ರಾ ಆರ್ಚರ್ ಸ್ಥಾನಕ್ಕೆ ಗಸ್ ಆ್ಯಟ್ಕಿನ್ಸನ್ರನ್ನು ತರಲಾಗಿದೆ ಮತ್ತು ಓಲೀ ಪೋಪ್ ಸ್ಥಾನಕ್ಕೆ ಜಾಕೋಬ್ ಬೆತೆಲ್ ಬಂದಿದ್ದಾರೆ.
‘‘ಎಡ ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ವೇಗದ ಬೌಲರ್ ಜೋಫ್ರಾ ಆರ್ಚರ್ ರನ್ನು ಸರಣಿಯ ಉಳಿದ ಭಾಗದಿಂದ ಹೊರಗಿಡಲಾಗಿದೆ’’ ಎಂದು ಇಂಗ್ಲೆಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸರಣಿಯ ಮೊದಲ ಮೂರು ಟೆಸ್ಟ್ಗಳಲ್ಲಿ ಆರ್ಚರ್ ಇಂಗ್ಲೆಂಡ್ ನ ಶ್ರೇಷ್ಠ ಬೌಲರ್ ಆಗಿದ್ದರು. ಅವರು 80 ಓವರ್ ಗಳನ್ನು ಹಾಕಿ ಒಂಭತ್ತು ವಿಕೆಟ್ ಗಳನ್ನು ಪಡೆದಿದ್ದಾರೆ. ಆರ್ಚರ್ ಅನುಪಸ್ಥಿತಿಯು ಇಂಗ್ಲೆಂಡ್ ಗೆ ದೊಡ್ಡ ಹಿನ್ನಡೆಯಾಗಿದೆ. ಅದು ಈಗಾಗಲೇ ಸರಣಿಯಲ್ಲಿ 0-3ರ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ 11: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆತೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಗಸ್ ಆ್ಯಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.







