ಆರ್ಚರಿ: ಭಜನ್ ಕೌರ್ ಪ್ರಿ-ಕ್ವಾರ್ಟರ್ ಫೈನಲ್ ಗೆ

ಭಜನ್ ಕೌರ್ |PC : PTI
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಂಗಳವಾರ ನಡೆದ ಮಹಿಳೆಯರ ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲಿ ಭಾರತೀಯ ಮಹಿಳಾ ಆರ್ಚರ್ ಗಳು ಮಿಶ್ರ ಫಲ ಪಡೆದರು. ಭಜನ್ ಕೌರ್ ಅಂತಿಮ-16ರ ಸುತ್ತಿಗೆ ಪ್ರವೇಶಿಸಿ ಭಾರತೀಯರಿಗೆ ಸಂತಸ ತಂದರೆ, ಅಗ್ರ ಶ್ರೆಯಾಂಕಿತೆ ಅಂಕಿತಾ ಭಕತ್ ಅಂತಿಮ-32ರ ಸುತ್ತಿನಲ್ಲಿ ನಿರ್ಗಮಿಸಿ ನಿರಾಶೆಗೊಳಿಸಿದರು.
ಭಜನ್ ಕೌರ್ ಆಗಸ್ಟ್ 3ರಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದ್ದಾರೆ.
ವೈಯಕ್ತಿಕ ಸ್ಪರ್ಧೆಯಲ್ಲಿ ಭಜನ್ ಕೌರ್ ಪೊಲ್ಯಾಂಡ್ ನ ಆಟಗಾರ್ತಿ ಶಿಫಾ ಕಮಲ್ ರನ್ನು 7-3(27-27, 27-29, 29-27, 27-25, 28-25)ಅಂತರದಿಂದ ಮಣಿಸಿದರು. ಭಕತ್ ಅವರು ಪೊಲ್ಯಾಂಡ್ ನ ವಿಲೊಲೆಟಾ ಮೈಸ್ಜೋರ್ ವಿರುದ್ಧ 4-6 ಅಂತರದಿAದ ಸೋತಿದ್ದಾರೆ.
ಪೊಲ್ಯಾಂಡ್ ನ ವಿಲೊಲೆಟಾರನ್ನು 6-0 ಅಂತರದಿಂದ ಮಣಿಸಿರುವ ಭಜನ್ ಕೌರ್ ಅವರು ಅಂತಿಮ-16ರ ಸುತ್ತು ತಲುಪಿದ್ದಾರೆ.
Next Story





