ಜಾವಗಲ್ ಶ್ರೀನಾಥ್, ಮುಹಮ್ಮದ್ ಶಮಿ ಅವರಿದ್ದ ಪಟ್ಟಿಗೆ ಅರ್ಷದೀಪ್ ಸೇರ್ಪಡೆ

ಅರ್ಷದೀಪ್ ಸಿಂಗ್ | Photo Credit : PTI
ಆಕ್ಲೆಂಡ್: ಅರ್ಷದೀಪ್ ಸಿಂಗ್ ನ್ಯೂಝಿಲ್ಯಾಂಡ್ ನೆಲದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಗೊಂಚಲು ಪಡೆದ ಭಾರತದ ಮೂರನೇ ವೇಗದ ಬೌಲರ್ ಎನಿಸಿಕೊಂಡರು. ಜಾವಗಲ್ ಶ್ರೀನಾಥ್ ಹಾಗೂ ಮುಹಮ್ಮದ್ ಶಮಿ ಅವರನ್ನೊಳಗೊಂಡ ಪಟ್ಟಿಗೆ ಸೇರಿದ್ದಾರೆ.
ಈಡನ್ಪಾರ್ಕ್ನಲ್ಲಿ ಬುಧವಾರ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ 70 ರನ್ಗೆ ನಾಲ್ಕು ವಿಕೆಟ್ಗಳನ್ನು ಪಡೆದ ಅರ್ಷದೀಪ್ ಈ ಸಾಧನೆ ಮಾಡಿದರು.
ಅರ್ಷದೀಪ್ ಅವರ ಸ್ಪೆಲ್(4/70) ನ್ಯೂಝಿಲ್ಯಾಂಡ್ನಲ್ಲಿ ಭಾರತೀಯ ವೇಗಿಯಿಂದ ದಾಖಲಾದ ನಾಲ್ಕನೇ ಶ್ರೇಷ್ಠ ಪ್ರದರ್ಶನವಾಗಿದೆ. ಶ್ರೀನಾಥ್ ಅಗ್ರ ಎರಡು ಸ್ಥಾನದಲ್ಲಿದ್ದಾರೆ. ಅವರು 2003ರಲ್ಲಿ ಆಕ್ಲೆಂಡ್ನಲ್ಲಿ 23ಕ್ಕೆ 4 ಹಾಗೂ 1995ರಲ್ಲಿ ನೇಪಿಯರ್ನಲ್ಲಿ 52ಕ್ಕೆ 4 ವಿಕೆಟ್ ಪಡೆದಿದ್ದರು. ಶಮಿ 2014ರಲ್ಲಿ ನೇಪಿಯರ್ನಲ್ಲಿ 55 ರನ್ಗೆ 4 ವಿಕೆಟ್ಗಳನ್ನು ಪಡೆದಿದ್ದರು.
ಅರ್ಷದೀಪ್ ಈ ವರ್ಷ ಐದು ಏಕದಿನ ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದಿದ್ದಾರೆ.
Next Story




