ದಿಲ್ಲಿ ಅಂಡರ್-19 ತಂಡದ ನಾಯಕನಾಗಿ ಆರ್ಯವೀರ್ ಸೆಹ್ವಾಗ್

ಆರ್ಯವೀರ್ ಸೆಹ್ವಾಗ್ | Photo Credit : x
ಹೊಸದಿಲ್ಲಿ: ಆರ್ಯವೀರ್ ಸೆಹ್ವಾಗ್ಗೆ ಮೊದಲ ಪ್ರಮುಖ ನಾಯಕತ್ವದ ಹೊಣೆ ವಹಿಸಲಾಗಿದ್ದು, 18ರ ವಯಸ್ಸಿನ ಆಟಗಾರನನ್ನು ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ದಿಲ್ಲಿಯ ಅಂತರ್-19 ತಂಡದ ನಾಯಕನಾಗಿ ನೇಮಿಸಲಾಗಿದೆ.
ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಇತ್ತೀಚೆಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ವಿನೂ ಮಂಕಡ್ ಟ್ರೋಫಿಗಾಗಿ ಅ.8ರಿಂದ ವಿಶಾಖಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.
ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ರ ಪುತ್ರ ಆರ್ಯವೀರ್ ಕಳೆದ ತಿಂಗಳು ರಾಜ್ಕೋಟ್ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಯಲ್ಲಿ ಭಾರತೀಯ ತಂಡದ ಭಾಗವಾಗಿದ್ದರು. ಮೊದಲ ಪಂದ್ಯದಲ್ಲಿ 28 ರನ್, ಎರಡನೇ ಪಂದ್ಯದಲ್ಲಿ 47 ರನ್ ಹಾಗೂ ಮೂರನೇ ಪಂದ್ಯದಲ್ಲಿ 34 ರನ್ ಕಲೆ ಹಾಕಿದ್ದರು. ಸರಣಿಯ ಮೂರು ಇನಿಂಗ್ಸ್ಗಳಲ್ಲಿ ಒಟ್ಟು 109 ರನ್ ಗಳಿಸಿದ್ದರು.
ಇತ್ತೀಚೆಗೆ ಸೀನಿಯರ್ ದೇಶೀಯ ಕ್ರಿಕೆಟ್ನಲ್ಲಿ ಸ್ವಲ್ಪ ಕಾಲ ಕಾಣಿಸಿಕೊಂಡಿದ್ದ ಆರ್ಯವೀರ್ಗೆ ಭಾರತದ ಅಂಡರ್-19 ಸರಣಿಯು ಅತ್ಯಂತ ಮುಖ್ಯವಾಗಿದೆ.
2024ರಲ್ಲಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಮೇಘಾಲಯ ತಂಡದ ವಿರುದ್ಧ ದಿಲ್ಲಿ ಪರ 297 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು.




