100 ಟಿ20 ವಿಕೆಟ್ ಪಡೆದ ಮೊದಲ ಭಾರತೀಯ ಅಷರ್ದೀಪ್ ಸಿಂಗ್

ಅಷರ್ದೀಪ್ ಸಿಂಗ್ | PC : PTI
ಹೊಸದಿಲ್ಲಿ, ಸೆ. 20: ನೂರು ಅಂತರ್ರಾಷ್ಟ್ರೀಯ ಟಿ20 ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯನಾಗಿ ಅರ್ಷದೀಪ್ ಸಿಂಗ್ ಶುಕ್ರವಾರ ಇತಿಹಾಸ ನಿರ್ಮಿಸಿದ್ದಾರೆ. ಅವರು ಈ ಸಾಧನೆಯನ್ನು ಕೇವಲ 64 ಪಂದ್ಯಗಳಲ್ಲಿ ಮಾಡಿದ್ದಾರೆ.
ಭಾರತದ ಕೊನೆಯ ಏಶ್ಯ ಕಪ್ ಗುಂಪು ಪಂದ್ಯದಲ್ಲಿ, ಒಮಾನ್ ತಂಡದ ವಿನಾಯಕ ಶುಕ್ಲಾರ ವಿಕೆಟ್ ಪಡೆಯುವ ಮೂಲಕ ಸಿಂಗ್ ಈ ಸಾಧನೆಗೈದಿದ್ದಾರೆ.
ಈವರೆಗೆ ಜಗತ್ತಿನಲ್ಲಿ 25 ಬೌಲರ್ಗಳು ನೂರಕ್ಕಿಂತ ಹೆಚ್ಚು ಅಂತರ್ರಾಷ್ಟ್ರೀಯ ಟಿ20 ವಿಕೆಟ್ಗಳನ್ನು ಪಡೆದಿದ್ದಾರೆ. ಅಷರ್ದೀಪ್ ವೇಗವಾಗಿ ಈ ಸಾಧನೆಯನ್ನು ಮಾಡಿದ್ದಾರೆ. ಅವರು ಚೊಚ್ಚಲ ಅಂತರ್ರಾಷ್ಟ್ರೀಯ ಟಿ20 ಪಂದ್ಯವಾಡಿದ್ದು 2022 ಜುಲೈಯಲ್ಲಿ ಇಂಗ್ಲೆಂಡ್ ವಿರುದ್ಧ. ಈ ಮಾದರಿಯ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಗಳಿಸಲು ಅವರು ಕೇವಲ ಮೂರು ವರ್ಷ 74 ದಿನಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಅವರು 100 ವಿಕೆಟ್ಗಳ ಗಡಿಯನ್ನು ಅತ್ಯಂತ ಕ್ಷಿಪ್ರವಾಗಿ ತಲುಪಿದ 2ನೇ ವೇಗದ ಬೌಲರ್ ಆಗಿದ್ದಾರೆ. ಮೊದಲನೇ ಸ್ಥಾನದಲ್ಲಿ ಬಹ್ರೇನ್ನ ರಿಝ್ವಾನ್ ಭಟ್ ಇದ್ದಾರೆ. ಅವರು 2 ವರ್ಷಗಳು, 240 ದಿನಗಳಲ್ಲಿ ಈ ಸಾಧನೆಗೈದಿದ್ದಾರೆ.
ಇದರೊಂದಿಗೆ ಅವರು ಮುಂಚೂಣಿ ಭಾರತೀಯ ಬೌಲರ್ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ನೂರು ಟೆಸ್ಟ್ ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ವಿನೂ ಮಂಕಡ್. ಆದರೆ, 100 ಏಕದಿನ ವಿಕೆಟ್ಗಳನ್ನು ಉರುಳಿಸಿದ ಮೊದಲ ಭಾರತೀಯ ಕಪಿಲ್ ದೇವ್ ಆಗಿದ್ದಾರೆ.





