ಏಶ್ಯ ಕಪ್|ನಾಳೆ ಭಾರತ ತಂಡಕ್ಕೆ ಒಮಾನ್ ಎದುರಾಳಿ

PC : NDTV
ಅಬುಧಾಬಿ: ಏಶ್ಯ ಕಪ್ ಟಿ-20 ಟೂರ್ನಿಯಲ್ಲಿ ಶುಕ್ರವಾರ ನಡೆಯಲಿರುವ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಒಮಾನ್ ತಂಡವನ್ನು ಎದುರಿಸಲಿದೆ.
‘ಎ’ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್-4 ಹಂತಕ್ಕೇರಿರುವ ಹಿನ್ನೆಲೆಯಲ್ಲಿ ಈ ಪಂದ್ಯವು ಅಷ್ಟೇನೂ ಮಹತ್ವ ಪಡೆದಿಲ್ಲ. ಸೂಪರ್-4 ಹಂತಕ್ಕಿಂತ ಮೊದಲು ತನ್ನ ಕೆಲವು ಬೌಲರ್ಗಳು, ಮಧ್ಯಮ ಹಾಗೂ ಕೆಳ ಸರದಿಯ ಬ್ಯಾಟರ್ಗಳನ್ನು ಪರೀಕ್ಷಿಸಲು ಈ ಪಂದ್ಯವು ಭಾರತಕ್ಕೆ ಅನುಕೂಲಕರವಾಗಿದೆ.
ಭಾರತ ತಂಡದಲ್ಲಿರುವ ನಾಲ್ವರು ಆಟಗಾರರು ಇನ್ನೂ ಒಂದು ಪಂದ್ಯ ಆಡಿಲ್ಲ. ಅಗ್ರ-8ರಲ್ಲಿ ಮೂವರು ಆಟಗಾರರು ಈ ತನಕ ಎರಡೂ ಪಂದ್ಯಗಳನ್ನು ಆಡಿದ್ದಾರೆ.
ಒಮಾನ್ ತಂಡವು ಮುಂದಿನ ತಿಂಗಳು ಟಿ-20 ವಿಶ್ವಕಪ್ ಏಶ್ಯ ಹಾಗೂ ಈಸ್ಟ್ ಏಶ್ಯ-ಪೆಸಿಫಿಕ್ ರೀಜನಲ್ ಕ್ವಾಲಿಫೈಯರ್ಗಿಂತ ಮೊದಲು ಪೂರ್ಣ ಸದಸ್ಯ ರಾಷ್ಟ್ರದ ವಿರುದ್ದ ತನ್ನ ಕೊನೆಯ ಪಂದ್ಯ ಆಡಲಿದೆ. ಈ ಟೂರ್ನಿಯಲ್ಲಿ ಆಡಲಿರುವ 8 ತಂಡಗಳ ಪೈಕಿ ಒಮಾನ್ ಕೂಡ ಒಂದಾಗಿದೆ.
ಭಾರತ ತಂಡವು ಸಂಜು ಸ್ಯಾಮ್ಸನ್ರನ್ನು ವಿಕೆಟ್ಕೀಪರ್ ಆಗಿ ಉಳಿಸಿಕೊಳ್ಳಬಹುದು. ಸ್ಯಾಮ್ಸನ್ ಅವರು ಯುಎಇ ಹಾಗೂ ಪಾಕಿಸ್ತಾನದ ವಿರುದ್ಧ ಆಡುವ ಅವಕಾಶ ಪಡೆದಿರಲಿಲ್ಲ.
ಭಾರತವು ಏಶ್ಯ ಕಪ್ನಲ್ಲಿ ಈ ತನಕ ಆಡಿರುವ 2 ಪಂದ್ಯಗಳಲ್ಲಿ ಕೇವಲ ಓರ್ವ ಪ್ರಮುಖ ಬೌಲರ್ ಅನ್ನು ಆಡಿಸಿದೆ. ಬುಮ್ರಾ ವಿಶ್ರಾಂತಿ ಪಡೆದರೆ, ಅರ್ಷದೀಪ್ ಸಿಂಗ್ ಅಥವಾ ಹರ್ಷಿತ್ ರಾಣಾ ಅವಕಾಶ ಪಡೆಯಬಹುದು. ಭಾರತವು ಮೊದಲೆರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಒಮಾನ್ ತಂಡವು 14 ಆಟಗಾರರಿಗೆ ಅವಕಾಶ ನೀಡಿದೆ.
ತಂಡಗಳು:
ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್, 3. ಸೂರ್ಯಕುಮಾರ್ ಯಾದವ್(ನಾಯಕ), 4. ತಿಲಕ್ ವರ್ಮಾ, 5. ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), 6. ಶಿವಂ ದುಬೆ, 7. ಹಾರ್ದಿಕ್ ಪಾಂಡ್ಯ,8. ಅಕ್ಷರ್ ಪಟೇಲ್, 9. ಹರ್ಷಿತ್ ರಾಣಾ, 10. ಅರ್ಷದೀಪ್ ಸಿಂಗ್, 11. ಕುಲದೀಪ ಯಾದವ್/ವರುಣ್ ಚಕ್ರವರ್ತಿ.
ಒಮಾನ್(ಸಂಭಾವ್ಯ): 1. ಜತೀಂದರ್ ಸಿಂಗ್(ನಾಯಕ), 2.ಆಮಿರ್ ಕಲೀಂ, 3. ಹಮ್ಮದ್ ಮಿರ್ಝಾ, 4. ವಸೀಂ ಅಲಿ, 5. ಆರ್ಯನ್ ಬಿಶ್ತ್, 6. ವಿನಾಯಕ ಶುಕ್ಲಾ(ವಿಕೆಟ್ಕೀಪರ್), 7. ಜಿತೇನ್, 8. ಶಾ ಫೈಸಲ್, 9. ಶಕೀಲ್ ಅಹ್ಮದ್, 10. ಹಸನೈನ್ ಶಾ, 11. ಸಮಯ್ ಶ್ರೀವಾಸ್ತವ.







