ಏಶ್ಯಕಪ್ ಸೂಪರ್-4: ಭಾರತ ವಿರುದ್ಧ ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ

ಕೊಲಂಬೊ, ಸೆ.10: ಏಶ್ಯಕಪ್ ಸೂಪರ್ 4 ಪಂದ್ಯದಲ್ಲಿ ರವಿವಾರ ಟಾಸ್ ಜಯಿಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಭಾರತದ ಆಡುವ ಬಳಗಕ್ಕೆ ಕೆ.ಎಲ್. ರಾಹುಲ್ ಹಾಗೂ ಜಸ್ ಪ್ರೀತ್ ಬುಮ್ರಾ ವಾಪಸಾಗಿದ್ದಾರೆ. ಅಭ್ಯಾಸದ ವೇಳೆ ಶ್ರೇಯಸ್ ಅಯ್ಯರ್ ಬೆನ್ನು ನೋವಿಗೆ ಒಳಗಾದ ಕಾರಣ ಕೆ.ಎಲ್. ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನುಭಾರತ ತಂಡದಲ್ಲಿ ಸೇರಿಸಲಾಗಿದೆ.
ಮತ್ತೊಂದೆಡೆ, ವೇಗಿ ಮುಹಮ್ಮದ್ ಶಮಿ ಬದಲಿಗೆ ಬುಮ್ರಾ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಕೊಲಂಬೊದಲ್ಲಿ ಹವಾಮಾನವು ಪ್ರಸ್ತುತ ಸ್ಪಷ್ಟವಾಗಿದೆ ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯ ಕಪ್ 20223 ಸೂಪರ್ 4 ಪಂದ್ಯದ ಮೇಲೆ ಮಳೆಯ ಭೀತಿ ಇನ್ನೂ ಇದೆ .ಸಂಜೆ 7 ಗಂಟೆಯವರೆಗೂ ಮಳೆ ನಿಲ್ಲುವ ನಿರೀಕ್ಷೆ ಇದೆ.
Next Story





