ಏಷ್ಯನ್ ಚಾಂಪಿಯನ್ಸ್ ಟ್ರೋಫಿ | ಮಲೇಶ್ಯವನ್ನು ಮಣಿಸಿದ ಭಾರತ, ಹರ್ಮನ್ ಪ್ರೀತ್ ಹ್ಯಾಟ್ರಿಕ್

ಹರ್ಮನ್ ಪ್ರೀತ್ | Photo Credit : PTI
ಜಲಂಧರ್, ನ. 1: ಮಲೇಶ್ಯ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿರುವ ಭಾರತದ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ 3ನೇ, 33ನೇ ಹಾಗೂ 58ನೇ ನಿಮಿಷದಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಪೂರೈಸಿದ ನಾಯಕ ಹರ್ಮನ್ ಪ್ರೀತ್ ಸಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 43ನೇ ನಿಮಿಷದಲ್ಲಿ ಚಾಣಾಕ್ಷತನದಿಂದ ಫೀಲ್ಡ್ ಗೋಲು ಗಳಿಸಿದ ಸುಖಜೀತ್ ಸಿಂಗ್ ಭಾರತ ತಂಡಕ್ಕೆ ಎಲ್ಲ ಮೂರು ಅಂಕಗಳನ್ನು ತಂದುಕೊಡಲು ನೆರವಾದರು. ಮಲೇಶ್ಯ ತಂಡ ಎರಡು ಗೋಲು ಗಳಿಸಿ ಮರುಹೋರಾಟ ನೀಡಿದರೂ ಭಾರತ ತಂಡ ಸ್ಪರ್ಧೆಯುದ್ದಕ್ಕೂ ನಿಯಂತ್ರಣ ಕಾಯ್ದುಕೊಂಡಿತು.
ಹರ್ಮನ್ ಪ್ರೀತ್ 58ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರು.
ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ಗಳಿಸಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಭಾರತ ತಂಡ ಸೋಮವಾರ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.
Next Story




