ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ತಂಡದಲ್ಲಿ ಕರ್ನಾಟಕದ ಮುಹಮ್ಮದ್ ರಾಹೀಲ್ ಗೆ ಸ್ಥಾನ

ಹೊಸದಿಲ್ಲಿ: ಮುಂಬರುವ ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ನಿವೃತ್ತಿಯಾಗಿರುವ ಹಾಕಿ ದಂತಕತೆ ಪಿ.ಆರ್. ಶ್ರೀಜೇಶ್‌ರಿಂದ ತೆರವಾಗಿರುವ ಮುಖ್ಯ ಗೋಲ್‌ಕೀಪರ್ ಸ್ಥಾನಕ್ಕೆ ಕೃಷ್ಣ ಬಹದ್ದೂರ್ ಪಾಠಕ್‌ರನ್ನು ನೇಮಿಸಲಾಗಿದೆ. ತಂಡದಲ್ಲಿ ಕರ್ನಾಟಕದ ಮುಹಮ್ಮದ್ ರಾಹೀಲ್ ಮೌಸೀನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
28 ವರ್ಷದ ರಾಹೀಲ್ ಈ ವರೆಗೆ ಭಾರತದ ಪರ 8 ಪಂದ್ಯಗಳನ್ನಾಡಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್ ನಾಯಕನಾಗಿ ಮುಂದುವರಿಯಲಿದ್ದು, ವಿವೇಕ್ ಸಾಗರ್ ಪ್ರಸಾದ್ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಆಡಿದ 10 ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದಾರೆ.
Next Story





