ಏಶ್ಯ ಕಪ್; ಬಾಂಗ್ಲಾವನ್ನು 5 ವಿಕೆಟ್ಗಳಿಂದ ಸೋಲಿಸಿದ ಲಂಕಾ

Photo- PTI
ಪಲ್ಲೆಕೆಲೆ (ಶ್ರೀಲಂಕಾ): ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಗುರುವಾರ ನಡೆದ ಏಶ್ಯ ಕಪ್ ಪಂದ್ಯವೊಂದರಲ್ಲಿ, ಶ್ರೀಲಂಕಾವು ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಸೋಲಿಸಿದೆ. ಅರ್ಧ ಶತಕಗಳನ್ನು ಬಾರಿಸಿದ ಸದೀರ ಸಮರವಿಕ್ರಮ (54) ಮತ್ತು ಚರಿತ್ ಅಸಲಂಕ (62 ಅಜೇಯ) ಶ್ರೀಲಂಕಾದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೆಲ್ಲಲು 50 ಓವರ್ಗಳಲ್ಲಿ 165 ರನ್ ಗಳಿಸುವ ಸುಲಭ ಗುರಿಯನ್ನು ಪಡೆದ ಶ್ರೀಲಂಕಾ ಇನ್ನೂ 66 ಎಸೆತಗಳು ಬಾಕಿಯಿರುವಂತೆಯೇ ವಿಜಯಿಯಾಯಿತು. ಅದು 39 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 165 ರನ್ಗಳನ್ನು ಗಳಿಸಿತು.
ನಾಯಕ ದಸುನ್ ಶನಕ 14 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಬಾಂಗ್ಲಾದೇಶದ ಪರವಾಗಿ ಶಾಕಿಬ್ ಅಲ್ ಹಸನ್ 2 ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಅದು ಬ್ಯಾಟಿಂಗ್ ಕುಸಿತ ಕಂಡು 42.4 ಓವರ್ಗಳಲ್ಲಿ 164 ರನ್ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ನಜ್ಮುಲ್ ಹುಸೈನ್ ಶಾಂಟೊರಿಗೆ ಮಾತ್ರ ಶ್ರೀಲಂಕಾದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು. ಅವರು 122 ಎಸೆತಗಳಲ್ಲಿ 89 ರನ್ಗಳನ್ನು ಗಳಿಸಿದರು. ಆರಂಭಿಕ ಮುಹಮ್ಮದ್ ನಯೀಮ್ 16 ರನ್ಗಳ ದೇಣಿಗೆ ನೀಡಿದರೆ, ತೌಹೀದ್ ಹೃದಯ್ 20 ಮತ್ತು ಮುಶ್ಫೀಕುರ್ರಹೀಮ್ 13 ರನ್ಗಳನ್ನು ಮಾಡಿದರು.
ಶ್ರೀಲಂಕಾದ ಪರವಾಗಿ ಮತೀಶ ಪತಿರಣ 32 ರನ್ಗಳನ್ನು ನೀಡಿ 4 ವಿಕೆಟ್ಗಳನ್ನು ಉರುಳಿಸಿದರು. ಮಹೀಶ್ ತೀಕ್ಷಣ 2 ವಿಕೆಟ್ಗಳನ್ನು ಪಡೆದರು.







