Asian Games | 10,000 ಮೀ. ಓಟ: ಗುಲ್ವೀರ್ ಸಿಂಗ್ ಗೆ ಬೆಳ್ಳಿ

ಗುಲ್ವೀರ್ ಸಿಂಗ್ | Photo Credit : PTI
ನಗೋಯ, ಸೆ.25: ಭಾರತದ ದೂರ ಅಂತರದ ಓಟಗಾರ ಗುಲ್ವೀರ್ ಸಿಂಗ್ ಏಶ್ಯನ್ ಗೇಮ್ಸ್ನಲ್ಲಿ ಪುರುಷರ 10,000 ಮೀ. ಓಟದಲ್ಲಿ ಬೆಳ್ಳಿ ಪದಕವನ್ನು ಜಯಿಸಿದರು. 2023ರ ಏಶ್ಯನ್ ಗೇಮ್ಸ್ ನಲ್ಲಿ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಗುಲ್ವೀರ್ 28:29.38 ಸೆಕೆಂಡ್ನಲ್ಲಿ ತನ್ನ ಓಟವನ್ನು ಪೂರ್ಣಗೊಳಿಸಿದರು. ಚಿನ್ನದ ಪದಕ ಜಯಿಸಿದ್ದ ಬಹರೈನ್ನ ಬಿರ್ಹಾನು ಬಾಲೆವ್ (28:27.51 ನಿಮಿಷ) ಗಿಂತ 1.87 ಸೆಕೆಂಡ್ನಿಂದ ಹಿಂದೆ ಬಿದ್ದರು.
ಸೀಮಾ ಕುಮಾರಿ ಗುರುವಾರ ಮಹಿಳೆಯರ 10,000 ಮೀ. ಓಟದಲ್ಲಿ ಕಂಚು ಜಯಿಸಿದ ಮರುದಿನವೇ ಗುಲ್ವೀರ್ ಬೆಳ್ಳಿ ಪದಕ ಜಯಿಸಿದ್ದಾರೆ.
32:20.05 ಅವಧಿಯಲ್ಲಿ ಗುರಿ ತಲುಪಿದ ಸೀಮಾ ಭಾರತಕ್ಕೆ 16 ವರ್ಷಗಳ ನಂತರ ಮಹಿಳೆಯರ 10,000 ಮೀ. ಓಟದಲ್ಲಿ ಪದಕ ಗೆದ್ದುಕೊಟ್ಟರು.
ಗ್ಲಾಸ್ಗೊದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎರಡನೇ ಸ್ಥಾನ ಪಡೆದಿರುವ ಗುಲ್ವೀರ್ ಇದೀಗ ಏಶ್ಯನ್ ಗೇಮ್ಸ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
Next Story




