Asian Games 2026 | ಸಾಫ್ಟ್ ಟೆನಿಸ್ ಪುರುಷರ ಸಿಂಗಲ್ಸ್ ನಲ್ಲಿ ಜೈ ಮೀನಾ ಸೆಮಿಫೈನಲ್ ಗೆ
ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಸಾಫ್ಟ್ ಟೆನಿಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತ

Photo: x.com/News18Sports
ನಗೋಯಾ: ಏಷ್ಯನ್ ಗೇಮ್ಸ್ 2026ರಲ್ಲಿ ಸಾಫ್ಟ್ ಟೆನಿಸ್ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜೈ ಮೀನಾ ಸೆಮಿಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಸಾಫ್ಟ್ ಟೆನಿಸ್ ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ್ದಾರೆ.
ರೋಚಕ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಫಿಲಿಪೈನ್ಸ್ ನ ನುಗುಯಿಟ್ ಶೆರ್ವಿನ್ ಅವರನ್ನು 0-4, 4-2, 2-4, 5-3, 2-4, 7-5 ಅಂತರದಲ್ಲಿ ಮಣಿಸಿ ಜೈ ಮೀನಾ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
2025ರ ಏಷ್ಯನ್ ಸಾಫ್ಟ್ ಟೆನಿಸ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜೈ ಮೀನಾ, ಇದೀಗ ಅದೇ ಅಮೋಘ ಫಾರ್ಮ್ ಅನ್ನು ಏಷ್ಯನ್ ಗೇಮ್ಸ್ ನಲ್ಲೂ ಮುಂದುವರಿಸಿದ್ದಾರೆ.
ಈ ಮಧ್ಯೆ , ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದ ಫೈನಲ್ಗೆ ಪ್ರವೇಶಿಸಿದ್ದಾರೆ. ಬುಧವಾರ ಶೂಟಿಂಗ್, ರೋಯಿಂಗ್ ಮತ್ತು ಕ್ಯಾನೋ ಸ್ಪ್ರಿಂಟ್ ವಿಭಾಗಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು.




