Asian Games | ಮಹಿಳಾ ಹಾಕಿ : ಭಾರತ ಸೆಮಿಫೈನಲ್ಗೆ

Picture by Asian Hockey Federation
ಕಕಮಿಗಹರ: ಏಶ್ಯನ್ ಗೇಮ್ಸ್ನ ಮಹಿಳಾ ಹಾಕಿ ಸ್ಪರ್ಧೆಯ ‘ಬಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ರವಿವಾರ ಭಾರತವು ಸಿಂಗಾಪುರವನ್ನು 7-0 ಗೋಲುಗಳ ಬೃಹತ್ ಅಂತರದಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಬುಧವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಭಾರತವು ದಕ್ಷಿಣ ಕೊರಿಯವನ್ನು ಎದುರಿಸಲಿದೆ.
ಕಕಮಿಗಹರದಲ್ಲಿ ನಡೆದ ಪಂದ್ಯದಲ್ಲಿ, ಸುನೆಲಿತಾ ಟೊಪ್ಪೊ ಎರಡು ಗೋಲುಗಳನ್ನು ಬಾರಿಸಿದರು. ಭಾರತವು ತಾನಾಡಿದ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.
ಭಾರತದ ಪರ ನಾಯಕಿ ಸಲೀಮಾ ಟೆಟೆ 17ನೇ ನಿಮಿಷದಲ್ಲಿ, ಸುನೆಲಿತಾ 22 ಮತ್ತು 24ನೇ ನಿಮಿಷಗಳಲ್ಲಿ, ಲಾಲ್ರೆಮ್ಸಿಯಾಮಿ 26ನೇ ನಿಮಿಷದಲ್ಲಿ, ಋತುಜಾ ದಾದಾಸೋ ಪಿಸಾಲ್ 29ನೇ ನಿಮಿಷದಲ್ಲಿ, ನಿಕ್ಕಿ ಪ್ರಧಾನ್ 35ನೇ ನಿಮಿಷದಲ್ಲಿ ಮತ್ತು ದೀಪಿಕಾ 55ನೇ ನಿಮಿಷದಲ್ಲಿ ಗೋಲುಗಳನ್ನು ದಾಖಲಿಸಿದರು.
Next Story




