Asian Games | ಬಾಕ್ಸಿಂಗ್: ಸಾಕ್ಷಿ ಚೌಧರಿ ಪ್ರಿ-ಕ್ವಾರ್ಟರ್ ಫೈನಲ್ಗೆ

Photo Credits: PTI
ನಗೋಯ: ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸಾಕ್ಷಿ ಚೌಧರಿ ಏಶ್ಯನ್ ಗೇಮ್ಸ್ನಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಫಿಲಿಪ್ಪೀನ್ಸ್ನ ಐರಾ ವಿಲ್ಲೆಗಸ್ರನ್ನು 5-0 ಒಮ್ಮತದ ತೀರ್ಪಿನಲ್ಲಿ ಸೋಲಿಸಿದ್ದಾರೆ.
ಈ ಗೆಲುವಿನ ಮೂಲಕ ಸಾಕ್ಷಿ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡರು.
ಭಾರತೀಯ ಬಾಕ್ಸರ್ ಎಲ್ಲ ಮೂರು ಸುತ್ತುಗಳನ್ನು ಸುಲಭವಾಗಿ ಗೆದ್ದಿದ್ದು, ಎಲ್ಲ ಐವರು ತೀರ್ಪುಗಾರರು ಪ್ರತಿ ಸುತ್ತಿನಲ್ಲಿ 10-9 ಸ್ಕೋರ್ ನೀಡಿದರು. ಸಾಕ್ಷಿ ಸ್ಪರ್ಧೆಯುದ್ದಕ್ಕೂ ನಿಯಂತ್ರಣ ಸಾಧಿಸಿದ್ದು, ನಿಖರ ಪಂಚ್ಗಳ ಮೂಲಕ ವಿಲ್ಲೆಗಸ್ಗೆ ಸಮಸ್ಯೆಯೊಡ್ಡಿದರು.
ಸಾಕ್ಷಿ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಸಾಕ್ಷಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ 51ಕೆಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಅಲುಯಾ ಬಾಲ್ಕಿಬೆಕೋವಾರನ್ನು ಎದುರಿಸಲಿದ್ದಾರೆ.
ಟೇಬಲ್ ಟೆನಿಸ್: ಭಾರತ ತಂಡ ಕ್ವಾರ್ಟರ್ ಫೈನಲ್ಗೆ
ನಗೋಯ: ಥಾಯ್ಲೆಂಡ್ ತಂಡವನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿದ ಭಾರತದ ಮಹಿಳೆಯರ ಟೇಬಲ್ ಟೆನಿಸ್ ತಂಡವು ಏಶ್ಯನ್ ಗೇಮ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದೆ.
ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಶ್ರೀಜಾ ಅಕುಲಾ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಭಾರತವು ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ಕೊರಿಯಾವನ್ನು ಎದುರಿಸಲಿದೆ.






