ಏಶ್ಯನ್ ಗೇಮ್ಸ್ ಗೆ ನೇರ ಪ್ರವೇಶ ವಿವಾದ: ಮೌನ ಮುರಿದ ಬಜರಂಗ್, ವಿನೇಶ್ ಫೋಗಟ್
ಹೊಸದಿಲ್ಲಿ: ಏಷ್ಯನ್ ಗೇಮ್ಸ್ ಟ್ರಯಲ್ಸ್ ನಿಂದ ವಿನಾಯಿತಿಯನ್ನು ಪಡೆದು ಮುಂಬರುವ ಏಶ್ಯನ್ ಗೇಮ್ಸ್ ಗೆ ನೇರ ಪ್ರವೇಶ ಪಡೆದು ಕುಸ್ತಿ ಸಹಪಾಠಿಗಳ ಕೋಪವನ್ನು ಎದುರಿಸುತ್ತಿರುವ ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಸೋಮವಾರ ಯುವ ಕುಸ್ತಿಪಟುಗಳು ತಮ್ಮನ್ನು ಕೋರ್ಟ್ ಗೆ ಎಳೆದೊಯ್ದಿದ್ದಕ್ಕಾಗಿ ನೋವಾಗಿದೆ. ಆದರೆ ಅದೇ ಸಮಯದಲ್ಲಿ ಜೂನಿಯರ್ ಕುಸ್ತಿಪಟುಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಆರಂಭಿಸುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
IOA ಅಡ್-ಹಾಕ್ ಪ್ಯಾನೆಲ್ ಹ್ಯಾಂಗ್ಝೌ ಗೇಮ್ಸ್ ಗಾಗಿ ಎಲ್ಲಾ 18 ವಿಭಾಗಗಳಲ್ಲಿ ಟ್ರಯಲ್ಸ್ ನಡೆಸಿತು. ಆದರೆ ಬಜರಂಗ್ (65kg) ಹಾಗೂ ವಿನೇಶ್ (53kg) ಗೆ ನೇರ ಪ್ರವೇಶ ನೀಡಲು ನಿರ್ಧರಿಸಿತು, ಇದು ಕುಸ್ತಿ ಬಳಗದಲ್ಲಿ ಅನೇಕರಿಂದ ಆಕ್ರೋಶದ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.
ಜೂನಿಯರ್ ಕುಸ್ತಿಪಟುಗಳಾದ ಆಂಟಿಮ್ ಪಾಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ದಿಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು, ವಿನಾಯಿತಿಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರು. ಆದರೆ ಅವರ ಅರ್ಜಿಯನ್ನು ವಜಾಗೊಳಿಸಲಾಯಿತು. ತರಬೇತಿಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ವಿದೇಶದಲ್ಲಿರುವ ಬಜರಂಗ್ ಮತ್ತು ವಿನೇಶ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರಕ್ಕೆ ಬಂದು ಆರೋಪಗಳು ಹಾಗೂ ಇತ್ತೀಚಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದರು.
"ನಾವು ಟ್ರಯಲ್ಸ್ ಗಳ ವಿರುದ್ಧ ಅಲ್ಲ. ನಾನು ಆಂಟಿಮ್ ಅನ್ನು ದೂಷಿಸಲು ಸಾಧ್ಯವಿಲ್ಲ. ಆಕೆಯ ತಪ್ಪಿಲ್ಲ.ಆಕೆ ಆಕೆಯ ಹಕ್ಕಿಗಾಗಿ ಹೋರಾಡುತ್ತಾಳೆ ಹಾಗೂ ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ಆಕೆ ತುಂಬಾ ಚಿಕ್ಕವಳು, ಅವಳು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ನಾವು ಏನೂ ತಪ್ಪು ಮಾಡಿಲ್ಲ. ನಾವು ವ್ಯವಸ್ಥೆಯ ವಿರುದ್ಧ, ಶಕ್ತಿಶಾಲಿಗಳ ವಿರುದ್ಧ ಹೋರಾಡಿದೆವು, ಆಗ ನಮ್ಮ ಸಹಾಯಕ್ಕೆ ಮುಂದೆ ಬರಲಿಲ್ಲ’’ ಎಂದು ವಿನೇಶ್ ಹೇಳಿದರು.