ಏಶ್ಯನ್ ಗೇಮ್ಸ್ | ಭಾರತದ ಪುರುಷರ ಹಾಕಿ ತಂಡ ಪ್ರಕಟ, ಹರ್ಮನ್ಪ್ರೀತ್ ನಾಯಕ

ಹರ್ಮನ್ಪ್ರೀತ್ ಸಿಂಗ್ | Photo Credit : PTI
ಹೊಸದಿಲ್ಲಿ, ಜು.29: ಜಪಾನ್ನಲ್ಲಿ ನಡೆಯಲಿರುವ 2026ರ ಆವೃತ್ತಿಯ ಏಶ್ಯನ್ ಗೇಮ್ಸ್ಗಾಗಿ ಹಾಕಿ ಇಂಡಿಯಾವು ಬುಧವಾರ 20 ಸದಸ್ಯರನ್ನು ಒಳಗೊಂಡ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ. ಸ್ಟಾರ್ ಡ್ರ್ಯಾಗ್ಫ್ಲಿಕರ್ ಹರ್ಮನ್ಪ್ರೀತ್ ಸಿಂಗ್ ಅವರು ನಾಯಕತ್ವವನ್ನು ಉಳಿಸಿಕೊಂಡಿದ್ದು ಭಾರತವು ಗೇಮ್ಸ್ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಶ್ರಮಿಸಲಿದ್ದಾರೆ.
ಭಾರತ ತಂಡವು ಆತಿಥೇಯ ಜಪಾನ್, ಕೊರಿಯಾ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಇಂಡೋನೇಶ್ಯದೊಂದಿಗೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಹಾಲಿ ಚಾಂಪಿಯನ್ ಭಾರತವು ಸೆಪ್ಟಂಬರ್ 20ರಂದು ಇಂಡೋನೇಶ್ಯದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ಶ್ರೀಲಂಕಾ(ಸೆ.22), ಕೊರಿಯಾ(ಸೆ.24), ಜಪಾನ್(ಸೆ.26)ಹಾಗೂ ಬಾಂಗ್ಲಾದೇಶ(ಸೆ.28) ತಂಡಗಳ ವಿರುದ್ಧ ಆಡಲಿದೆ.
12 ತಂಡಗಳನ್ನು ತಲಾ ಆರು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಕಕಾಮಿಗಹರಾದ ಗ್ರೀನ್ ಸ್ಟೇಡಿಯಂನಲ್ಲಿ ಹಾಕಿ ತಂಡಗಳು ಚಿನ್ನದ ಪದಕಕ್ಕಾಗಿ ಹೋರಾಡಲಿವೆ.
ಏಶ್ಯನ್ ಗೇಮ್ಸ್ಗಾಗಿ ಭಾರತದ ಪುರುಷರ ಹಾಕಿ ತಂಡ
-ಗೋಲ್ಕೀಪರ್ಗಳು: ಮೋಹಿತ್ ಎಚ್.ಎಸ್., ಸೂರಜ್ ಕರ್ಕೇರ.
-ಡಿಫೆಂಡರ್ಗಳು: ಜರ್ಮನ್ಪ್ರೀತ್ ಸಿಂಗ್, ಹರ್ಮನ್ಪ್ರೀತ್ ಸಿಂಗ್(ನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್ದೀಪ್ ಸಿವಾಚ್.
-ಮಿಡ್ ಫೀಲ್ಡರ್ಗಳು : ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್
-ಫಾರ್ವರ್ಡ್ಗಳು: ದಿಲ್ಪ್ರೀತ್ ಸಿಂಗ್, ಶೀಲಾನಂದ ಲಾಕ್ರಾ, ಸುಖಜೀತ್ ಸಿಂಗ್, ಮನ್ದೀಪ್ ಸಿಂಗ್, ಅಭಿಷೇಕ್.






