Asian Games | ಪುರುಷರ ಹಾಕಿ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Photo CreditL PTI
ನಗೋಯ: ಏಶ್ಯನ್ ಗೇಮ್ಸ್ನಲ್ಲಿ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡವು ಶ್ರೀಲಂಕಾ ತಂಡವನ್ನು 16-1 ಅಂತರದಿಂದ ಸುಲಭವಾಗಿ ಮಣಿಸಿದೆ.
ಎಲ್ಲ ನಾಲ್ಕು ಕ್ವಾರ್ಟರ್ಗಳಲ್ಲಿ ಭಾರತ ಸಲೀಸಾಗಿ ಗೋಲು ಗಳಿಸಿತು. ಎಂಟು ಆಟಗಾರರು ಗೋಲು ಗಳಿಸಿದ್ದು, ಈ ಪೈಕಿ ಜುಗ್ರಾಜ್ ಸಿಂಗ್, ದಿಲ್ಪ್ರೀತ್ ಸಿಂಗ್ ಹಾಗೂ ಅಭಿಷೇಕ್ ಹ್ಯಾಟ್ರಿಕ್ ಪೂರೈಸಿದರು.
ಮನ್ಪ್ರೀತ್ ಸಿಂಗ್ ಐದನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಮನ್ಪ್ರೀತ್ 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಮತ್ತೊಂದು ಗೋಲು ಗಳಿಸಿದರು. ಅಭಿಷೇಕ್ 11ನೇ ನಿಮಿಷದಲ್ಲಿ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. ಹರ್ಮನ್ಪ್ರೀತ್ ಸಿಂಗ್ 16ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು. 12ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಅಭಿಷೇಕ್ ಭಾರತದ ಮುನ್ನಡೆಯನ್ನು 5-0ಗೆ ವಿಸ್ತರಿಸಿದರು.
ಜುಗ್ರಾಜ್ 22ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಗೋಲು ಗಳಿಸಿದರು. ಸುಖಜೀತ್ ಸಿಂಗ್ ಮುಖಾಂತರ 29ನೇ ನಿಮಿಷದಲ್ಲಿ ಭಾರತವು 6ನೇ ಗೋಲು ಗಳಿಸಿತು. 30ನೇ ನಿಮಿಷದಲ್ಲಿ ಗೋಲು ಗಳಿಸಿದ ದಿಲ್ಪ್ರೀತ್ ಮೊದಲಾರ್ಧದಲ್ಲಿ ಭಾರತಕ್ಕೆ 8-0 ಮುನ್ನಡೆ ಒದಗಿಸಿಕೊಟ್ಟರು.
ಮೂರನೇ ಕ್ವಾರ್ಟರ್ನಲ್ಲಿ ಭಾರತ ಒತ್ತಡ ಮುಂದುವರಿಸಿತು. ಮನ್ಪ್ರೀತ್ 31ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ವಿವೇಕ್ ಸಾಗರ್ 36ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ದಿಲ್ಪ್ರೀತ್ 38ನೇ ನಿಮಿಷದಲ್ಲಿ ತನ್ನ ಎರಡನೇ ಗೋಲು ಗಳಿಸಿದರು. ಜುಗ್ರಾಜ್ 42ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಪೂರೈಸಿದರು.
45ನೇ ನಿಮಿಷದಲ್ಲಿ ಗೋಲು ಗಳಿಸಿದ ಹರ್ಮನ್ಪ್ರೀತ್ ಭಾರತದ ಮುನ್ನಡೆಯನ್ನು 13-0ಗೆ ವಿಸ್ತರಿಸಿದರು. ಅಭಿಷೇಕ್ 49ನೇ ನಿಮಿಷದಲ್ಲಿ ಹ್ಯಾಟ್ರಿಕ್ ಪೂರೈಸಿದರು. ಶ್ರೀಲಂಕಾ 50ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿತು. ಜುಗ್ರಾಜ್ ಸಿಂಗ್ 53ನೇ ನಿಮಿಷದಲ್ಲಿ ಗೋಲು ಗಳಿಸಿದ್ದು, ಇದು ಪಂದ್ಯದಲ್ಲಿ ಅವರ ನಾಲ್ಕನೇ ಗೋಲಾಗಿದೆ. 55ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ಹ್ಯಾಟ್ರಿಕ್ ಪೂರೈಸಿ ಭಾರತಕ್ಕೆ 16-1 ಅಂತರದ ಗೆಲುವು ತಂದುಕೊಟ್ಟರು.
ತನ್ನ ಮೊದಲ ಪಂದ್ಯದಲ್ಲಿ ಇಂಡೋನೇಶ್ಯ ತಂಡವನ್ನು 13-1 ಅಂತರದಿಂದ ಮಣಿಸಿರುವ ಭಾರತ ತಂಡವು ಇದೀಗ ಎರಡು ಪಂದ್ಯಗಳಲ್ಲಿ ಗೋಲು ವ್ಯತ್ಯಾಸದಲ್ಲಿ ಮೇಲುಗೈ(+27) ಸಾಧಿಸಿದೆ.
ಜಪಾನ್ ಹಾಗೂ ಕೊರಿಯ ಕೂಡ ತಮ್ಮ ಆರಂಭಿಕ ಎರಡು ಪಂದ್ಯಗಳನ್ನು ಜಯಿಸಿದ್ದು, ತಲಾ ಆರು ಅಂಕಗಳನ್ನು ಗಳಿಸಿದೆ. ಆದರೆ ಭಾರತವು ಗೋಲು ವ್ಯತ್ಯಾಸದಲ್ಲಿ ಮುಂದಿದೆ. ಭಾರತ ತಂಡ ಸೆ.24ರಂದು ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.






