Asian Games | ಸಾಫ್ಟ್ ಟೆನಿಸ್: ಕಂಚು ಗೆದ್ದ ಜಯ್ ಮೀನಾ

ಜಯ್ ಮೀನಾ | Photo Credit : PTI
ನಗೋಯ: ಜಯ್ ಮೀನಾ ಏಶ್ಯನ್ ಗೇಮ್ಸ್ನಲ್ಲಿ ಸಾಫ್ಟ್ ಟೆನಿಸ್ನಲ್ಲಿ ಭಾರತಕ್ಕೆ ಮೊತ್ತ ಮೊದಲ ಪದಕವನ್ನು ಗೆದ್ದುಕೊಟ್ಟು ಇತಿಹಾಸ ನಿರ್ಮಿಸಿದರು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ನಲ್ಲಿ ಜಯ್ ಮೀನಾ ಜಪಾನಿನ ಟಕುಯಾ ಕುರೊಸಕಾ ವಿರುದ್ಧ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ತನ್ನ ಮೂರನೇ ಏಶ್ಯನ್ ಗೇಮ್ಸ್ ಆಡಿದ 26ರ ವಯಸ್ಸಿನ ಜಯ್ ಮೀನಾ ಮೂರು ಗೇಮ್ಗಳ ಹಿನ್ನಡೆಯ ನಂತರ ಸ್ಫೂರ್ತಿಯುತ ಮರು ಹೋರಾಟ ನೀಡಿದರು. ಆದರೆ ಇದೇ ತೀವ್ರತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿ 45 ನಿಮಿಷಗಳ ಹೋರಾಟದಲ್ಲಿ 2-4(3-5, 1-4, 1-4, 4-1,6-4, 1-4)ಅಂತರದಿಂದ ಸೋಲನುಭವಿಸಿದರು.
ಇದಕ್ಕೂ ಮೊದಲು ಜಯ್ ಮೀನಾ ಕ್ವಾರ್ಟರ್ ಫೈನಲ್ನಲ್ಲಿ ಫಿಲಿಪ್ಪೀನ್ಸ್ ಆಟಗಾರ ಶೆರ್ವಿನ್ ನುಗುಟ್ರನ್ನು 4-3 ಅಂತರದಿಂದ ಮಣಿಸಿದರು. ಭಾರತವು ಏಶ್ಯನ್ ಗೇಮ್ಸ್ನಲ್ಲಿ ಮೊದಲ ಬಾರಿ ಸಾಫ್ಟ್ ಟೆನಿಸ್ನಲ್ಲಿ ಪದಕದೊಂದಿಗೆ ವಾಪಸಾಗಿದೆ.
Next Story




