Asian Games | ಸ್ವಿಮ್ಮಿಂಗ್: ಭಾರತದ ರಿಲೇ ತಂಡ ಫೈನಲ್‌ಗೆ

ನಗೋಯ: ಏಶ್ಯನ್ ಗೇಮ್ಸ್‌ನ ಮೂರನೇ ದಿನವಾದ ಮಂಗಳವಾರ ಸ್ವಿಮ್ಮಿಂಗ್‌ನಲ್ಲಿ ಭಾರತ ಮಿಶ್ರ ಫಲ ಪಡೆದಿದೆ. ಆರ್ಯನ್ ನೆಹ್ರಾ ಪುರುಷರ 1500 ಮೀ. ಫ್ರೀಸ್ಟೈಲ್ ಫೈನಲ್ ಬಿನಲ್ಲಿ ನಾಲ್ಕನೇ ಸ್ಥಾನ ಪಡೆದರು.
ರಿಷಭ್ ದಾಸ್, ಆಕಾಶ್ ಮಣಿ, ಬೆನೆಡಿಕ್ಷನ್ ಬೆನಿಸ್ಟೋನ್ ಹಾಗೂ ಧನುಶ್ ಸುರೇಶ್ ಹೀಟ್ಸ್‌ನಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು.
ಶೂಟಿಂಗ್: ಭಾರತದ ಶೂಟರ್‌ಗಳಾದ ಇಳವೆನಿಲ್ ವಲವರಿವನ್ ಹಾಗೂ ಪಾರ್ಥ ಮಾನೆ ಮಂಗಳವಾರ ನಡೆದ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಅರ್ಹತಾ ಸುತ್ತಿನಲ್ಲಿ 634.5 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಆದರೆ ಫೈನಲ್‌ನಲ್ಲಿ 376.3 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಚೀನಾದ ವಾಂಗ್ ಝಿಫಿ ಹಾಗೂ ಶೆಂಗ್ ಲಿಹಾವೊ ವಿಶ್ವ ದಾಖಲೆಯ ಸ್ಕೋರ್(507.1)ನೊಂದಿಗೆ ಚಿನ್ನದ ಪದಕ ಜಯಿಸಿದರು. ಕೊರಿಯಾ(502.9) ಹಾಗೂ ಜಪಾನ್(439.7) ಶೂಟರ್‌ಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
Next Story




