Asian Games | ಉದ್ಘಾಟನಾ ಸಮಾರಂಭದಿಂದ ಹೊರಗುಳಿದ ತಜಿಂದರ್ ಪಾಲ್; ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಭಾರತದ ಧ್ವಜಧಾರಿ

ಪವನ್ ಸೆಹ್ರಾವತ್ | Photo Credit : PTI
ನಗೊಯಾ, ಸೆ. 19: ಶಾಟ್ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಅವರು ಶನಿವಾರ ಆರಂಭವಾಗಿರುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದ್ದು, ಅವರ ಬದಲಿಗೆ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಭಾರತದ ಧ್ವಜಧಾರಿಯಾಗಿ ಭಾಗವಹಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಶೂಟರ್ ಮನು ಭಾಕರ್ ಜೊತೆಗೆ ತೂರ್ ಅವರು ರಾಷ್ಟ್ರೀಯ ತಂಡವನ್ನು ಮುನ್ನಡೆಸಬೇಕಾಗಿತ್ತು. ಆದರೆ, ತೂರ್ ಅವರ ಉದ್ಘಾಟನಾ ಸಮಾರಂಭದ ಕಿಟ್ ಇನ್ನೂ ಅವರಿಗೆ ತಲುಪಿಲ್ಲ. ಹೀಗಾಗಿ ಈ ಬದಲಾವಣೆ ಮಾಡಲಾಗಿದೆ.
ಕಳೆದ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ಕಬಡ್ಡಿ ತಂಡದಲ್ಲಿದ್ದ 30ರ ವಯಸ್ಸಿನ ಸೆಹ್ರಾವತ್ ಈಗ ತೂರ್ ಅವರ ಸ್ಥಾನವನ್ನು ತುಂಬಿದ್ದಾರೆ.
ಜಪಾನ್ನ ನಗೊಯಾದಲ್ಲಿ ಏಶ್ಯನ್ ಗೇಮ್ಸ್ನ ಉದ್ಘಾಟನಾ ಸಮಾರಂಭ ಭಾರತೀಯ ಕಾಲಮಾನ ಸಂಜೆ 6ರಿಂದ 8ರವರೆಗೆ ನಡೆಯಿತು.
‘‘ನನ್ನ ಕಿಟ್ ಇನ್ನೂ ಭಾರತದಲ್ಲೇ ಇದೆ. ಅತ್ಲೆಟಿಕ್ಸ್ ತಂಡದ ಯಾರೊಬ್ಬರ ಬಳಿಯೂ ಸಮಾರಂಭದ ಕಿಟ್ ಇಲ್ಲ’’ ಎಂದು ತೂರ್ ನೋವು ತೋಡಿಕೊಂಡರು.
Next Story




