Asian Games | ಡೆಕಾತ್ಲಾನ್ : ತೇಜಸ್ವಿನ್ ಶಂಕರ್ಗೆ ಕಂಚಿನ ಪದಕ; 2 ಪದಕ ಗೆದ್ದ ಮೊದಲ ಭಾರತೀಯ

Photo Credit: AP
ನಗೋಯ: ಏಶ್ಯನ್ ಗೇಮ್ಸ್ನ ಡೆಕಾತ್ಲಾನ್ ಸ್ಪರ್ಧೆಯಲ್ಲಿ ರವಿವಾರ ಭಾರತದ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಏಶ್ಯನ್ ಕ್ರೀಡಾಕೂಟದ ಅತ್ಯಂತ ಕಠಿಣ ಸ್ಪರ್ಧೆ ಎನಿಸಿಕೊಂಡಿರುವ ಡೆಕಾತ್ಲಾನ್ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಪುರುಷ ಅತ್ಲೀಟ್ ಆಗಿ ಹೊರಹೊಮ್ಮಿದ್ದಾರೆ.
2023ರ ಹಾಂಗ್ಝೂ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ತೇಜಸ್ವಿನ್, ಈ ಬಾರಿ ಒಟ್ಟು 7,934 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.
ಸ್ಥಳೀಯ ನೆಚ್ಚಿನ ಕ್ರೀಡಾಪಟು ಯುಮ ಮರುಯಮ 8123 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಚೀನಾದ ಚೆನ್ ಜಿಂಗ್ಹುವಾ 8012 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಕಣದಲ್ಲಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ತೌಫೀಕ್ ನೌಶಾದ್, ಗಾಯದ ಸಮಸ್ಯೆಯಿಂದಾಗಿ ಡೆಕಾತ್ಲಾನ್ನ ಎರಡನೇ ದಿನದ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು.
ತೇಜಸ್ವಿನ್ ಈ ವರ್ಷದ ಆರಂಭದಲ್ಲಿ, ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಕಂಚಿನ ಪದಕ ಗೆದ್ದಿದ್ದಾರೆ.
Next Story




