ಏಶ್ಯನ್ ಹಾಕಿ 5 ಎಸ್ ವರ್ಲ್ಡ್ ಕಪ್ ಕ್ವಾಲಿಫೈಯರ್; ಮತ್ತೊಂದು ಭರ್ಜರಿ ಜಯ ದಾಖಲಿಸಿದ ಭಾರತದ ಮಹಿಳಾ ತಂಡ

Photo:twitter/TheHockeyIndia
ಹೊಸದಿಲ್ಲಿ: ಮಸ್ಕತ್ನಲ್ಲಿ ನಡೆದ ಏಶ್ಯನ್ ಹಾಕಿ 5 ಎಸ್ ವರ್ಲ್ಡ್ ಕಪ್ ಕ್ವಾಲಿಫೈಯರ್ನಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡವು ಜಪಾನ್ ವಿರುದ್ಧ 7-1 ಅಂತರದಿಂದ ಗೆಲುವು ದಾಖಲಿಸಿದೆ.
ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಮಲೇಶ್ಯ ವಿರುದ್ಧ 7-2 ಅಂತರದಿಂದ ಜಯ ಸಾಧಿಸಿದ್ದ ಭಾರತ ಮತ್ತೊಂದು ಭರ್ಜರಿ ಜಯ ಗಳಿಸಿದೆ.ಫಾರ್ಮ್ನಲ್ಲಿರುವ ಮಹಿಮಾ ಚೌಧರಿ 7ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವುದರೊಂದಿಗೆ ಭಾರತವು ಆಕ್ರಮಣಕಾರಿ ಆರಂಭ ಪಡೆದಿತ್ತು.
ಮಹಿಮಾ ಚೌಧರಿ 30ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿತು. ಭಾರತದ ಪರ ಅಕ್ಷತಾ ಧೆಕಲೆ(8ನೇ ನಿಮಿಷ), ಮರಿಯನಾ ಕುಜುರ್(12ನೇ ನಿಮಿಷ), ಜ್ಯೋತಿ(23ನೇ ನಿಮಿಷ), ಮೋನಿಕಾ ದೀಪಿ ಟೊಪ್ಪೊ(27ನೇ ನಿಮಿಷ) ಹಾಗೂ ಅಜ್ಮಿನಾ ಕುಜುರ್(30ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು.
Next Story