ಏಷ್ಯನ್ ಪ್ಯಾರಾ ಗೇಮ್ಸ್ | ಶಾಟ್ಪುಟ್ ಎಫ್53: ಆಯುಷ್ ವರ್ಮಾಗೆ ಚಿನ್ನ

Photo Credit: hindustantimes
ನಗೋಯ, ಅ. 21: ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಬುಧವಾರ ಪುರುಷರ ಶಾಟ್ಪುಟ್ ಎಫ್53 ವಿಭಾಗದ ಸ್ಪರ್ಧೆಯಲ್ಲಿ ಭಾರತದ ಆಯುಷ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.
ಇದು ಜಪಾನ್ ನಲ್ಲಿ ಆಯುಷ್ ಗೆದ್ದ ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಅವರು ಪುರುಷರ ಜಾವೆಲಿನ್ ತ್ರೋ ಎಫ್53/ಎಫ್54 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಶಾಟ್ಪುಟ್ ಸ್ಪರ್ಧೆಯಲ್ಲಿ ಆಯುಷ್ ಗರಿಷ್ಠ 8.16 ಮೀಟರ್ ದೂರ ಗುಂಡು ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಇರಾನ್ನ ಅಲಿರೆಜಾ ಹೇಮಾಮಿ 8.09 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪಡೆದರೆ, ಕಝಖ್ಸ್ತಾನದ ಮಖಾಂಬೆಟ್ ಸೆರಿಕ್ಕಲಿಯೆವ್ 6.81 ಮೀಟರ್ ದೂರ ಗುಂಡು ಎಸೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಎಫ್53 ವಿಭಾಗವು ಕುಳಿತು ಎಸೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವ ದೈಹಿಕ ನ್ಯೂನತೆಯುಳ್ಳ ಕ್ರೀಡಾಪಟುಗಳಿಗಾಗಿ ಮೀಸಲಾದ ವಿಭಾಗವಾಗಿದೆ.
ಉತ್ತರ ಪ್ರದೇಶದ ಮೀರತ್ನ ಆಯುಷ್ ಅವರ ಪ್ಯಾರಾ ಕ್ರೀಡಾ ಪಯಣ 2020ರಲ್ಲಿ ಕೋಚ್ ರಾಬಿನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಶಾಟ್ಪುಟ್ ಅಭ್ಯಾಸ ಆರಂಭಿಸುವುದರೊಂದಿಗೆ ಶುರುವಾಯಿತು.




