Asian Para Games ಸಮಾರೋಪ ಸಮಾರಂಭ; 45 ದೇಶಗಳ 4,000 ಅತ್ಲೀಟ್ ಗಳು ಭಾಗಿ

Photo Credit : x
ನಗೋಯ, ಅ.24: ಐಚಿ-ನಗೋಯ ಏಷ್ಯನ್ ಪ್ಯಾರಾ ಗೇಮ್ಸ್ನ ಸಮಾರೋಪ ಸಮಾರಂಭವು ನಗೋಯದ ಮಿಝುಹೊ ಪಾರ್ಕ್ ಅತ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು. ಇದರೊಂದಿಗೆ ಒಂದು ವಾರ ಕಾಲ ನಡೆದ ಕ್ರೀಡಾಕೂಟ ಮುಕ್ತಾಯಗೊಂಡಿತು.
ಜಪಾನ್ನಲ್ಲಿ ಮೊದಲ ಬಾರಿಗೆ ನಡೆದ ಪ್ಯಾರಾ ಗೇಮ್ಸ್ನಲ್ಲಿ 45 ದೇಶಗಳು ಹಾಗೂ ಪ್ರದೇಶಗಳ ಅಂದಾಜು 4,000 ಅತ್ಲೀಟ್ಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಏಷ್ಯನ್ ಪ್ಯಾರಾ ಗೇಮ್ಸ್ನ ಮೊದಲ ಆವೃತ್ತಿ 2010ರಲ್ಲಿ ಚೀನಾದ ಗ್ವಾಂಗ್ಝೌನಲ್ಲಿ ನಡೆದಿತ್ತು. ಐಚಿ-ನಗೋಯ ಗೇಮ್ಸ್ ಐದನೇ ಆವೃತ್ತಿಯಾಗಿದೆ. 2030ರಲ್ಲಿ ನಡೆಯಲಿರುವ ಆರನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ ಆಯೋಜಿಸಲು ದೋಹಾ ಸಜ್ಜಾಗಿದೆ.
11 ಪದಕಗಳನ್ನು ಗೆದ್ದ ಭಾರತದ ಪ್ಯಾರಾ ಈಜುಗಾರರು
ಏಷ್ಯನ್ ಪ್ಯಾರಾ ಗೇಮ್ಸ್ನ ಈಜು ಸ್ಪರ್ಧೆಗಳಲ್ಲಿ ಭಾರತವು ಮೂರು ಬೆಳ್ಳಿ ಹಾಗೂ ಎಂಟು ಕಂಚಿನ ಪದಕಗಳು ಸೇರಿದಂತೆ ಒಟ್ಟು 11 ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದೆ. ಹಿಂದಿನ ಆವೃತ್ತಿಯಲ್ಲಿ ಭಾರತ ಕೇವಲ ಒಂದು ಕಂಚಿನ ಪದಕ ಗೆದ್ದಿತ್ತು.
ಬುಡಿಗಿನ ಪುರುಷರ ಎಸ್13 ವಿಭಾಗದ 100 ಮೀ. ಬ್ಯಾಕ್ಸ್ಟ್ರೋಕ್ ಹಾಗೂ ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 50 ಮೀ. ಫ್ರೀಸ್ಟೈಲ್ನಲ್ಲಿ ಕಂಚಿನ ಪದಕ ಜಯಿಸಿದ್ದರು.






