Asian Para Games | ಸ್ವರ್ಣ ಗೆದ್ದ ಶೀತಲ್ ದೇವಿ

ಶೀತಲ್ ದೇವಿ | Photo Credit : PTI
ನಗೋಯ, ಅ. 22: ಮಹಿಳೆಯರ ಕಾಂಪೌಂಡ್ ಸ್ಪರ್ಧೆಯಲ್ಲಿ ಸಿಂಗಾಪುರದ ಅಲಿಮ್ ನೂರ್ ಸಹೀದಾ ಅವರನ್ನು ಮಣಿಸಿದ ಶೀತಲ್ ದೇವಿ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿದ್ದಾರೆ.
19ರ ವಯಸ್ಸಿನ ವಿಶ್ವ ಚಾಂಪಿಯನ್ ಶೀತಲ್ ದೇವಿ ಅವರು ಅಲಿಮ್ ಅವರನ್ನು 142–139 ಅಂತರದಿಂದ ಮಣಿಸಿದರು.
ಈ ಹಿಂದೆ 2023ರ ಏಶ್ಯನ್ ಗೇಮ್ಸ್ ಫೈನಲ್ನಲ್ಲೂ ಶೀತಲ್ ಹಾಗೂ ಅಲಿಮ್ ಮುಖಾಮುಖಿಯಾಗಿದ್ದು, ಆಗ ಅಲಿಮ್ ಎರಡು ಅಂಕಗಳ ಅಂತರದಿಂದ ಸೋತಿದ್ದರು.
ಇದಕ್ಕೂ ಮೊದಲು ಶೀತಲ್ ದೇವಿ ಅವರು ಟೋಮನ್ ಕುಮಾರ್ ಜೊತೆಗೂಡಿ ಕಾಂಪೌಂಡ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಶೀತಲ್ ದೇವಿ ಬುಧವಾರ ಪಾಯಲ್ ನಾಗ್ ಅವರೊಂದಿಗೆ ಕಾಂಪೌಂಡ್ ಮಹಿಳೆಯರ ಡಬಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
Next Story




