ಎಟಿಪಿ ರ್ಯಾಂಕಿಂಗ್: ಅಗ್ರ-2 ಸ್ಥಾನದಲ್ಲಿ ಸಿನ್ನರ್, ಅಲ್ಕರಾಝ್

ಸಿನ್ನರ್, ಅಲ್ಕರಾಝ್ | PC ; X
ಪ್ಯಾರಿಸ್, ಆ.20: ಜನ್ನಿಕ್ ಸಿನ್ನರ್ ಹಾಗೂ ಕಾರ್ಲೊಸ್ ಅಲ್ಕರಾಝ್ ಮಂಗಳವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್ ನಲ್ಲಿ ಟಾಪ್-2 ಸ್ಥಾನದಲ್ಲೇ ಮುಂದುವರಿದಿದ್ದಾರೆ. 2025ರ ಆವೃತ್ತಿಯ ಯು.ಎಸ್. ಓಪನ್ ಟೂರ್ನಿಯ ಡ್ರಾ ಪ್ರಕ್ರಿಯೆಗೆ ಇದೇ ರ್ಯಾಂಕಿಂಗ್ ಬಳಸುವ ಸಾಧ್ಯತೆಯಿದೆ.
ಸಿನ್ನರ್ ಹಾಗೂ ಅಲ್ಕರಾಝ್ ಅವರು ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಮುಖಾಮುಖಿಯಾದ್ದಂತೆ ಡ್ರಾನಲ್ಲೂ ಎದುರಾಳಿಯಾಗಬಹುದು. ಈ ವರ್ಷದ ಯು.ಎಸ್. ಓಪನ್ನ ಡ್ರಾ ಗುರುವಾರ ಬಹಿರಂಗವಾಗಲಿದೆ.
2022ರ ಯು.ಎಸ್. ಓಪನ್ ಚಾಂಪಿಯನ್ ಸ್ಪೇನ್ ನ ಅಲ್ಕರಾಝ್ ಈ ವರ್ಷದ ಟೂರ್ನಿಗೆ ಸಿನ್ಸಿನಾಟಿ ಪ್ರಶಸ್ತಿ ಗೆಲುವಿನ ವಿಶ್ವಾಸದೊಂದಿಗೆ ಪ್ರವೇಶಿಸಲಿದ್ದಾರೆ.
ಅಲ್ಕರಾಝ್ ಅವರು ಎಟಿಪಿ ರ್ಯಾಂಕಿಂಗ್ಸ್ ನಲ್ಲಿ ಹಾಲಿ ಯು.ಎಸ್. ಓಪನ್ ಚಾಂಪಿಯನ್ ಸಿನ್ನರ್ ಗಿಂತ 1,890 ಅಂಕಗಳಿಂದ ಹಿಂದಿದ್ದಾರೆ. ಅಲ್ಕರಾಝ್ ಕಳೆದ ವರ್ಷ ಯು.ಎಸ್. ಓಪನ್ನಲ್ಲಿ 2ನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಈ ವರ್ಷ ಸಿನ್ನರ್ ಗಿಂತ ಉತ್ತಮ ಫಲಿತಾಂಶ ಪಡೆದರೆ 2023ರ ಸೆಪ್ಟಂಬರ್ ನಂತರ ಮೊದಲ ಬಾರಿ ನಂ.1 ರ್ಯಾಂಕಿಂಗ್ಗೆ ತಲುಪಲಿದ್ದಾರೆ.
ಸಿನ್ಸಿನಾಟಿ ಟೂರ್ನಿಯಲ್ಲಿ 4ನೇ ಸುತ್ತು ತಲುಪಿದ ನಂತರ ಕರೆನ್ ಖಚನೋವ್ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ಎಟಿಪಿ ಟಾಪ್-10 ರ್ಯಾಂಕಿಂಗ್:
ಜನ್ನಿಕ್ ಸಿನ್ನರ್(ಇಟಲಿ),
ಕಾರ್ಲೊಸ್ ಅಲ್ಕರಾಝ್(ಸ್ಪೇನ್),
ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ),
ಟೇಲರ್ ಫ್ರಿಟ್ಝ್(ಅಮೆರಿಕ),
ಜಾಕ್ ಡ್ರೇಪರ್(ಬ್ರಿಟನ್),
ಬೆನ್ ಶೆಲ್ಟನ್(ಅಮೆರಿಕ),
ನೊವಾಕ್ ಜೊಕೊವಿಕ್(ಸರ್ಬಿಯ),
ಅಲೆಕ್ಸ್ ಡಿ ಮಿನೌರ್(ಆಸ್ಟ್ರೇಲಿಯ),
ಕರೆನ್ ಖಚನೋವ್,
ಲೊರೆಂರೊ ಮುಸೆಟ್ಟಿ(ಇಟಲಿ).







