LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ
ವಿಶ್ವಕಪ್ ಫೈನಲ್ : 200ರ ಗಡಿ ದಾಟಿದ ಆಸೀಸ್

PHOTO:@cricketworldcup
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 241 ರನ್ ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಭಾರತದ ಬೌಲರ್ಗಳ ದಾಳಿಗೆ ನಲುಗಿ, 3 ವಿಕೆಟ್ ಕಳೆದುಕೊಂಡಿದೆ.
2ನೇ ಓವರ್ನಲ್ಲಿ ಶಮಿ ಬೌಲಿಂಗ್ ನಲ್ಲಿ ಡೇವಿಡ್ ವಾರ್ನರ್ 7 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಮಿಷೆಲ್ ಮಾರ್ಷ್ 15 ರನ್ ಗಳಿಸಿ 4.3 ಓವರ್ನಲ್ಲಿ ಬೂಮ್ರಾ ಬೌಲಿಂಗ್ ನಲ್ಲಿ ಕೆ ಎಲ್ ರಾಹುಲ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಸ್ಟೀವನ್ ಸ್ಮಿತ್ 6.6 ಓವರ್ ಗಳಲ್ಲಿ 4 ರನ್ ಗಳಿಸಿ ಬೂಮ್ರಾ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಪ್ರಸಕ್ತ ಟ್ರಾವಿಸ್ ಹೆಡ್ 19 ರನ್ ಹಾಗೂ ಮಾರ್ನಸ್ ಲಾಬುಶೇನ್ ಅವರಿಗೆ ಸಾಥ್ ನೀಡಿ ಕ್ರೀಸ್ನಲ್ಲಿದ್ದಾರೆ. ಆಸ್ಟ್ರೇಲಿಯಗೆ ಗೆಲ್ಲಲು 181 ರನ್ ಗಳ ಅವಶ್ಯಕತೆಯಿದೆ.
Live Updates
- 19 Nov 2023 8:33 PM IST
32 ನೇ ಓವರ್ ಮುಕ್ತಾಯ. ಕುಲ್ ದೀಪ್ ಯಾದವ್ ಓವರ್ನಲ್ಲಿ 2 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 172/3
- 19 Nov 2023 8:30 PM IST
31 ನೇ ಓವರ್ ಮುಕ್ತಾಯ. ರವೀಂದ್ರ ಜಡೇಜ ಬೌಲಿಂಗ್ ನಲ್ಲಿ 2 ರನ್ ಗಳಿಸಿದ ಆಸೀಸ್. ನಿಧಾನವಾಗಿ ಬಿಗಿ ಬೌಲಿಂಗ್ ಗೆ ಮರಳುತ್ತಿರುವ ಭಾರತ. ಆಸ್ಟ್ರೇಲಿಯ 169/3
- 19 Nov 2023 8:27 PM IST
30 ನೇ ಓವರ್ ಮುಕ್ತಾಯ. ಬೂಮ್ರ ಬೌಲಿಂಗ್ನಲ್ಲಿ 2 ರನ್ ಗಳಿಸಿದ ಆಸೀಸ್. ರನ್ ಹರಿಯಲು ಬಿಡದ ಬೂಮ್ರ. ಆಸ್ಟ್ರೇಲಿಯ 167/3
- 19 Nov 2023 8:22 PM IST
29 ನೇ ಓವರ್ ಮುಕ್ತಾಯ. ರವೀಂದ್ರ ಜಡೇಜ ಬೌಲಿಂಗ್ನಲ್ಲಿ 3 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 165/3
- 19 Nov 2023 8:20 PM IST
ಡಿಆರ್ಎಸ್ ಮನವಿ ಮಾಡಿದ ರೋಹಿತ್ ಬಳಗ. ಲಾಬುಶೇನ್ ಗೆ ಜೀವದಾನ. ಬೂಮ್ರಾ ಓವರ್ ನಲ್ಲಿ 14 ರನ್ ಗಳಿಸಿದ ಆಸೀಸ್. 28ನೇ ಓವರ್ ಮುಕ್ತಾಯ. ಆಸೀಸ್ 162/3
- 19 Nov 2023 8:13 PM IST
27 ನೇ ಓವರ್ ಮುಕ್ತಾಯ. ರವೀಂದ್ರ ಜಡೇಜ ಬೌಲಿಂಗ್ನಲ್ಲಿ 4 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 148/3
- 19 Nov 2023 8:10 PM IST
26 ನೇ ಓವರ್ ಮುಕ್ತಾಯ. ಮುಹಮ್ಮದ್ ಶಮಿ ಬೌಲಿಂಗ್ನಲ್ಲಿ 9 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 144/3
- 19 Nov 2023 8:06 PM IST
25 ನೇ ಓವರ್ ಮುಕ್ತಾಯ. ಕ್ರೀಸ್ಗೆ ಅಂಟಿಕೊಂಡು ರಕ್ಷಣಾತ್ಮಕ ಆಟ ಪ್ರದರ್ಶಿಸುತ್ತಿರುವ ಆಸ್ಟ್ರೇಲಿಯ ಬ್ಯಾಟರ್ಗಳು. ಭಾರತದ ಪಾಲಿಗೆ ದುಸ್ವಪ್ನದಂತೆ ಕಾಡುತ್ತಿರುವ ಟ್ರಾವೆಸ್ ಹೆಡ್. ವಿಕೆಟ್ ಗಳಿಸಲು ಪರದಾಡುತ್ತಿರುವ ಭಾರತೀಯ ಬೌಲರ್ಗಳು. ಸ್ಪಿನ್ ಬೌಲರ್ಗಳ ಲಯ ಅರಿತ ಅಸೀಸ್ ಪಡೆ. ರವೀಂದ್ರ ಜಡೇಜ ಬೌಲಿಂಗ್ನಲ್ಲಿ 8 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 135/3
- 19 Nov 2023 8:03 PM IST
24 ನೇ ಓವರ್ ಮುಕ್ತಾಯ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಟ್ರಾವಿಸ್ ಹೆಡ್. ಮುಹಮ್ಮದ್ ಶಮಿ ಬೌಲಿಂಗ್ನಲ್ಲಿ ಒಂದು ಬೌಂಡರಿ ಸಹಿತ 5 ರನ್ ಗಳಿಸಿದ ಆಸೀಸ್. ಆಸ್ಟ್ರೇಲಿಯ 127/3
- 19 Nov 2023 7:59 PM IST
23 ನೇ ಓವರ್ ಮುಕ್ತಾಯ. ರವೀಂದ್ರ ಜಡೇಜ ಸ್ಪಿನ್ ದಾಳಿ. ರನ್ ಪೇರಿಸುತ್ತಿರುವ ಆಸ್ಟ್ರೇಲಿಯ. 5 ರನ್ ಗಳಿಕೆ. ಆಸೀಸ್ 122/3





