T20 ವಿಶ್ವಕಪ್ | ಲೀಗ್ ಹಂತದಲ್ಲೇ ಹೊರಬಿದ್ದ ಆಸ್ಟ್ರೇಲಿಯಾ; ಸೂಪರ್ 8ಕ್ಕೆ ಝಿಂಬಾಬ್ವೆ

Photo credit: PTI
ಪಲ್ಲೇಕೆಲ್: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪಯಣ ಲೀಗ್ ಹಂತದಲ್ಲೇ ಅಂತ್ಯಗೊಂಡಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಐರ್ಲೆಂಡ್ ವಿರುದ್ಧ ಪಲ್ಲೇಕೆಲ್ನಲ್ಲಿ ನಡೆಯಬೇಕಿದ್ದ ಲೀಗ್ ಪಂದ್ಯ ಮಳೆಯಿಂದ ರದ್ದಾದ ಪರಿಣಾಮ ಝಿಂಬಾಬ್ವೆ ತಂಡಕ್ಕೆ ಲಾಭವಾಗಿದ್ದು, ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವೆ ಅಂಕಗಳು ಹಂಚಿಕೆಯಾಯಿತು. ಆ ಮೂಲಕ ಝಿಂಬಾಬ್ವೆ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಿತು.
ಟೂರ್ನಿಯ ಆರಂಭದಲ್ಲಿ ಬಲಿಷ್ಠ ತಂಡವೆಂದು ಪರಿಗಣಿಸಲ್ಪಟ್ಟ ಆಸ್ಟ್ರೇಲಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು, ಮಳೆಯ ಅಡ್ಡಿ ಅಂತಿಮವಾಗಿ ತಂಡದ ಮುಂದಿನ ಹಂತದ ಆಸೆಗಳಿಗೆ ತೆರೆ ಎಳೆದಿತು. ಮತ್ತೊಂದೆಡೆ, ಲೀಗ್ ಹಂತದಲ್ಲಿ ಸಂಗ್ರಹಿಸಿದ ಅಂಕಗಳು ಝಿಂಬಾಬ್ವೆಗೆ ಸೂಪರ್ 8ರ ಪ್ರವೇಶಕ್ಕೆ ನೆರವಾದವು.
Next Story




