15 ವರ್ಷಗಳ ನಂತರ ಐಸಿಸಿ ಟೂರ್ನಿಯ ಫೈನಲ್ ಪಂದ್ಯ ಸೋತ ಆಸ್ಟ್ರೇಲಿಯ

PC : X
ಲಾರ್ಡ್ಸ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ಗಳ ಅಂತರದಿಂದ ಸೋಲುಂಡಿದೆ. ಕಾಂಗರೂ ಪಡೆಯು 15 ವರ್ಷಗಳ ಬಳಿಕ ಮೊದಲ ಬಾರಿ ಐಸಿಸಿ ಪಂದ್ಯಾವಳಿಯ ಫೈನಲ್ ನಲ್ಲಿ ಎಡವಿದೆ.
ದಕ್ಷಿಣ ಆಫ್ರಿಕಾ ತಂಡವು 2010ರ ನಂತರ ಆಸ್ಟ್ರೇಲಿಯ ತಂಡವನ್ನು ಫೈನಲ್ ನಲ್ಲಿ ಸೋಲಿಸಿದ ಮೊದಲ ತಂಡ ಎನಿಸಿಕೊಂಡಿದೆ. 2010ರ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಆಸ್ಟ್ರೇಲಿಯಕ್ಕೆ ಸೋಲುಣಿಸಿತ್ತು. ಒಟ್ಟಾರೆ 4ನೇ ಬಾರಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಸೋಲುಂಡಿದೆ.
ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಕ್ರಮವಾಗಿ 1975ರ ವಿಶ್ವಕಪ್ ಹಾಗೂ 1996ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡಕ್ಕೆ ಗರ್ವಭಂಗ ಮಾಡಿದ್ದವು.
ಆಸ್ಟ್ರೇಲಿಯ ತಂಡವು 14 ಐಸಿಸಿ ಟೂರ್ನಮೆಂಟ್ ಫೈನಲ್ ಪಂದ್ಯಗಳಲ್ಲಿ ಕೇವಲ 4 ಬಾರಿ ಸೋತಿದೆ.
ಇದೇ ವೇಳೆ 1998ರ ನಾಕೌಟ್ ಟ್ರೋಫಿಯ ನಂತರ ಮೊದಲ ಬಾರಿ ಐಸಿಸಿ ಟ್ರೋಫಿಗೆ ಮುತ್ತಿಟ್ಟಿರುವ ದಕ್ಷಿಣ ಆಫ್ರಿಕಾ ತಂಡವು 27 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ.





