ಮಹಿಳೆಯರ ಟಿ-20 ವಿಶ್ವಕಪ್ ನಂತರ ಆಸ್ಟ್ರೇಲಿಯದ ವೇಗಿ ಮೆಗಾನ್ ಶುಟ್ ನಿವೃತ್ತಿ

ಮೆಗಾನ್ ಶುಟ್ | Photo Credit : PTI
ಮೆಲ್ಬರ್ನ್, ಮೇ 25: ‘‘ಮುಂಬರುವ 2026ರ ಆವೃತ್ತಿಯ ಟಿ-20 ವಿಶ್ವಕಪ್ ನನ್ನ ಕೊನೆಯ ಪ್ರಮುಖ ಐಸಿಸಿ ಟೂರ್ನಮೆಂಟ್ ಆಗಿದೆ. ಮುಂದಿನ ಪೀಳಿಗೆಯ ಆಟಗಾರರಿಗೆ ಆಡಲು ಅವಕಾಶ ನೀಡಲು ಸಿದ್ದನಾಗಿದ್ದೇನೆ’’ ಎಂದು ಆಸ್ಟ್ರೇಲಿಯದ ವೇಗದ ಬೌಲರ್ ಮೆಗಾನ್ ಶುಟ್ ಸೋಮವಾರ ಹೇಳಿದ್ದಾರೆ.
2012ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿರುವ 33ರ ವಯಸ್ಸಿನ ಶುಟ್ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 240 ಪಂದ್ಯಗಳಲ್ಲಿ 309 ವಿಕೆಟ್ಗಳನ್ನು ಪಡೆದಿದ್ದಾರೆ. ಕಳೆದೆರಡು ವಿಶ್ವಕಪ್ ಅಭಿಯಾನಗಳಲ್ಲಿ ಆಸ್ಟ್ರೇಲಿಯ ತಂಡವು ಸೆಮಿ ಫೈನಲ್ನಲ್ಲಿ ನಿರ್ಗಮಿಸಿರುವ ಕಾರಣ ಈ ಬಾರಿ ಉತ್ತಮ ಪ್ರದರ್ಶನದ ಗುರಿ ಇಟ್ಟುಕೊಂಡಿದ್ದಾರೆ.
ಆಸ್ಟ್ರೇಲಿಯ ತಂಡವು ಏಳನೇ ಬಾರಿ ಟಿ-20 ವಿಶ್ವಕಪ್ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದೆ. ಟಿ-20 ವಿಶ್ವಕಪ್ ಟೂರ್ನಿಯು ಜೂನ್ 12ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಆರಂಭವಾಗಲಿದೆ.
ಆಸ್ಟ್ರೇಲಿಯ ತಂಡವು ‘ಎ’ ಗುಂಪಿನಲ್ಲಿದ್ದು, ಜೂನ್ 13ರಂದು ಮ್ಯಾಂಚೆಸ್ಟರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ತನ್ನ ಅಭಿಯಾನ ಆರಂಭಿಸಲಿದೆ.




