ಪಾಕಿಸ್ತಾನದ ಟಿ-20 ತಂಡಕ್ಕೆ ಬಾಬರ್ ಆಝಂ ವಾಪಸ್

ಬಾಬರ್ ಆಝಂ | Photo Credit : PTI
ಕರಾಚಿ, ಅ.27: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಬಾಬರ್ ಆಝಂ ಅವರು ಟಿ-20 ಕ್ರಿಕೆಟಿಗೆ ವಾಪಸಾಗಲಿದ್ದು, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನ ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ಇದರೊಂದಿಗೆ ಬಾಬರ್ 2024ರ ಡಿಸೆಂಬರ್ ನಂತರ ಮೊದಲ ಬಾರಿ ಟಿ-20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪಾಕಿಸ್ತಾನ ತಂಡದ ತರಬೇತಿಯ ವೇಳೆ ರಾವಲ್ಪಿಂಡಿ ಸ್ಟೇಡಿಯಂ ಹೊರಗೆ ನಡೆದ ಮಾಧ್ಯಮ ಸಂವಾದದಲ್ಲಿ ಹೆಸ್ಸನ್ ಈ ಪ್ರಕಟನೆ ನೀಡಿದರು.
ದೇಶೀಯ ಕ್ರಿಕೆಟ್ ನತ್ತ ಗಮನ ನೀಡಲು ಆರಂಭಿಕ ಬ್ಯಾಟರ್ ಫಖರ್ ಝಮಾನ್ ಟಿ-20 ಕ್ರಿಕೆಟ್ನಿಂದ ತಾತ್ಕಾಲಿಕವಾಗಿ ವಿರಾಮ ಪಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
31ರ ವಯಸ್ಸಿನ ಬಾಬರ್ ದಕ್ಷಿಣ ಆಫ್ರಿಕಾ ವಿರುದ್ಧವೇ ಕೊನೆಯ ಟಿ-20 ಪಂದ್ಯ ಆಡಿದ್ದರು. ಈ ತನಕ 128 ಟಿ-20 ಪಂದ್ಯವನ್ನಾಡಿರುವ ಅವರು 39.34ರ ಸರಾಸರಿಯಲ್ಲಿ 36 ಅರ್ಧಶತಕ, 3 ಶತಕಗಳ ಸಹಿತ ಒಟ್ಟು 4,223 ರನ್ ಗಳಿಸಿದ್ದಾರೆ.
Next Story





