IPL ಪ್ರಸಾರಕ್ಕೆ ಅನಿರ್ದಿಷ್ಟಾವಧಿ ನಿಷೇಧ ಹೇರಿದ ಬಾಂಗ್ಲಾದೇಶ

ಸಾಂದರ್ಭಿಕ ಚಿತ್ರ (PTI)
ಢಾಕಾ: ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ ರಹ್ಮಾನ್ ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಟ್ಟ ವಿವಾದದ ಬೆನ್ನಿಗೇ, ಬಾಂಗ್ಲಾದೇಶ ಸರಕಾರವು ಐಪಿಎಲ್ ಪ್ರಸಾರ ಹಾಗೂ ಜಾಹೀರಾತಿನ ಮೇಲೆ ಅನಿರ್ದಿಷ್ಟಾವಧಿ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಮುಂದಿನ ಆದೇಶದವರೆಗೆ ಐಪಿಎಲ್ ಗೆ ಸಂಬಂಧಿಸಿದ ಪ್ರಸಾರ, ಜಾಹೀರಾತುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಜನವರಿ 5ರಂದು ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ನಿರ್ಧಾರವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಳ್ಳಲಾಗಿದೆ ಹಾಗೂ ಸೂಕ್ತ ಪ್ರಾಧಿಕಾರಗಳು ಈ ನಿರ್ಧಾರವನ್ನು ಅನುಮೋದಿಸಿವೆ ಎಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ.
ಮುಂದಿನ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಾಂಗ್ಲಾದೇಶದ ಆಟಗಾರ ಮುಸ್ತಫಿಝುರ್ ರಹ್ಮಾನ್ ರನ್ನು ಕೈಬಿಡುವ ನಿರ್ಧಾರದ ಬೆನ್ನಿಗೇ ಈ ಆದೇಶ ಹೊರ ಬಿದ್ದಿದೆ.
Next Story





