ಆಟಗಾರರ ವಯಸ್ಸು ಪತ್ತೆಗಾಗಿ ಹೆಚ್ಚುವರಿ ಮೂಳೆ ಪರೀಕ್ಷೆ: ಬಿಸಿಸಿಐ ನಿರ್ಧಾರ

PC : BCCI
ಹೊಸದಿಲ್ಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಮಹತ್ವದ ನಿರ್ಧಾರವೊಂದರಲ್ಲಿ ವಯೋವರ್ಗ ಕ್ರಿಕೆಟ್ ಟೂರ್ನಿಗಳಲ್ಲಿ ಆಟಗಾರರ ವಯಸ್ಸು ಪತ್ತೆ ಹೆಚ್ಚಲು ಹೆಚ್ಚುವರಿಯಾಗಿ ಮೂಳೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಜೂನಿಯರ್ ಮಟ್ಟದಲ್ಲಿ ಉದಯೋನ್ಮುಖ ಕ್ರಿಕೆಟಿಗರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ.
ಈಗಿನ ನಿಯಮದ ಪ್ರಕಾರ ವಯೋವರ್ಗ ಹಂತದಲ್ಲಿ ವಯಸ್ಸಿನ ನಿರ್ಧಾರಕ್ಕೆ ಆಟಗಾರ ಹಾಗೂ ಆಟಗಾರ್ತಿಗೆ ಟಿಡಬ್ಲ್ಯು3(ಮೂಳೆ ಮೂಲಕ ವಯಸ್ಸು ನಿರ್ಧಾರ ಪರೀಕ್ಷೆ)ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ ವರ್ಷ ಅದೇ ವಯೋವರ್ಗದಲ್ಲಿ ಆಡಲು +1 ವಯಸ್ಸನ್ನು ಪರಿಗಣಿಸಲಾಗುತ್ತಿತ್ತು. ಆದರೆ ಬದಲಾದ ನಿಯಮಗಳ ಪ್ರಕಾರ, ಮರು ವರ್ಷ ಮೂಳೆ ಪರೀಕ್ಷೆ ಮಾಡಿ, ಆಟಗಾರ ಅದೇ ವಯೋಮಿತಿಯಲ್ಲಿ ಆಡಲು ಅರ್ಹರೇ ಎಂದು ತಿಳಿದುಕೊಳ್ಳಲಾಗುತ್ತದೆ. ಆಟಗಾರರ ಸರಿಯಾದ ವಯಸ್ಸು ತಿಳಿದುಕೊಳ್ಳಲು ಹೀಗೆ ಮಾಡಲಾಗುತ್ತಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
Next Story





