ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆಗೆ ಸೆ.28ರಂದು ಬಿಸಿಸಿಐ ಮಹಾಸಭೆ

PC : BCCI
ಹೊಸದಿಲ್ಲಿ, ಸೆ.6: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ)ಮುಂಬೈನಲ್ಲಿರುವ ತನ್ನ ಪ್ರಧಾನಕಚೇರಿಯಲ್ಲಿ ಸೆ.28ರಂದು 94ನೇ ವಾರ್ಷಿಕ ಮಹಾಸಭೆಯನ್ನು ಕರೆದಿದೆ.
ಈ ಸಭೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸಹಿತ ಕ್ರಿಕೆಟ್ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬಿಸಿಸಿಐನ ವಾರ್ಷಿಕ ಮಹಾಸಭೆಯು ಯುಎಇನಲ್ಲಿ ನಡೆಯಲಿರುವ ಏಶ್ಯ ಕಪ್ ಟೂರ್ನಿಯ ಫೈನಲ್ ಪಂದ್ಯದಂದೇ ನಡೆಯಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿಯ ಯಾವುದೇ ಸದಸ್ಯ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಹಾಜರಾಗುವ ಸಾಧ್ಯತೆಯಿಲ್ಲ.
ಬೆಂಗಳೂರಿನಲ್ಲಿ ನಡೆದಿದ್ದ 93ನೇ ವಾರ್ಷಿಕ ಮಹಾಸಭೆ ಹಾಗೂ ಜನವರಿ, ಮಾರ್ಚ್ನಲ್ಲಿ ನಡೆದಿದ್ದ ಎರಡು ವಿಶೇಷ ಮಹಾ ಸಭೆಗಳ ನಿರ್ಣಯವನ್ನು ಪರಿಶೀಲಿಸುವುದು ಸಭೆಯ ಕಾರ್ಯಸೂಚಿಯಲ್ಲಿದೆ.
ಬಿಸಿಸಿಐನ ಉನ್ನತ ನಾಯಕತ್ವ ತಂಡವನ್ನು ಆಯ್ಕೆ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.
ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಹಾಗೂ ಐಪಿಎಲ್ ಆಡಳಿತ ಮಂಡಳಿಯಲ್ಲಿ ಹೊಸ ಪ್ರತಿನಿಧಿಗಳನ್ನು ಸಭೆಯಲ್ಲಿ ನೇಮಿಸಲಾಗುವುದು.
............
ವಂದನಾ ಕಟಾರಿಯಾ, ಲಲಿತ್ ಉಪಾಧ್ಯಾಯಗೆ ಹಾ







