ಏಶ್ಯಕಪ್ |ಪಾಕಿಸ್ತಾನ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಿದ ಬಿಸಿಸಿಐ

Photo credit: PTI
ದುಬೈ: 2025ರ ಏಶ್ಯ ಕಪ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ತಿಕ್ಕಾಟ ಮುಂದುವರಿದಿದೆ. ಕಳೆದ ರವಿವಾರ ದುಬೈನಲ್ಲಿ ನಡೆದ ಏಶ್ಯ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರಾದ ಹಾರಿಸ್ ರವೂಫ್ ಹಾಗೂ ಶಾಹಿಬ್ಜಾದಾ ಫರ್ಹಾನ್ ಪ್ರದರ್ಶಿಸಿದ ಪ್ರಚೋದನಾಕಾರಿ ಸನ್ನೆಗಳ ವಿರುದ್ಧ ಐಸಿಸಿಗೆ ಬಿಸಿಸಿಐ ಅಧಿಕೃತ ದೂರು ನೀಡಿದೆ.
ಬುಧವಾರ ಬಿಸಿಸಿಐ ಇವರಿಬ್ಬರು ಆಟಗಾರರ ವಿರುದ್ಧ ICCಗೆ ದೂರು ದಾಖಲಿಸಿದೆ. ಒಂದು ವೇಳೆ ಶಾಹಿಬ್ಜಾದಾ ಮತ್ತು ರವೂಫ್ ಈ ಆರೋಪಗಳನ್ನೇನಾದರೂ ಲಿಖಿತವಾಗಿ ನಿರಾಕರಿಸಿದರೆ, ಐಸಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಆಗ ಅವರು ಐಸಿಸಿ ಎಲೈಟ್ ಪ್ಯಾನೆಲ್ ರೆಫರಿ ರಿಚಿ ರಿಚಿರ್ಡ್ಸನ್ ಎದುರು ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವರದಿಯಾಗಿದೆ.
Next Story





