ಮಿಕ್ಸೆಡ್ ಡಬಲ್ಸ್: ಬೋಪಣ್ಣ-ಶುಐ ಕ್ವಾರ್ಟರ್ ಫೈನಲ್ಗೆ

ಝಾಂಗ್ ಶುಐ , ರೋಹನ್ ಬೋಪಣ್ಣ | PC : PTI
ಮೆಲ್ಬರ್ನ್: ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಅವರ ಚೀನಾದ ಜೊತೆಗಾರ್ತಿ ಝಾಂಗ್ ಶುಐ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ಬೋಪಣ್ಣ-ಶುಐ ರವಿವಾರ 2ನೇ ಸುತ್ತಿನ ಪಂದ್ಯದಲ್ಲಿ ವಾಕ್ ಓವರ್ ಪಡೆದ ಕಾರಣ ಮುಂದಿನ ಸುತ್ತಿಗೇರಿದರು. ಬೋಪಣ್ಣ-ಶುಐ ಅಮೆರಿಕದ ಟೇಲರ್ ಟೌನ್ಸೆಂಡ್ ಹಾಗೂ ಮೊನಾಕೊದ ಹ್ಯುಗೊ ನಿಸ್ರನ್ನು ಎದುರಿಸಬೇಕಾಗಿತ್ತು. ಆದರೆ ಭಾರತ-ಚೀನಾದ ಜೋಡಿ ಕೋರ್ಟ್ಗೆ ಇಳಿಯದೆ ಅಂತಿಮ-8ರ ಸುತ್ತಿಗೇರಿದೆ.
Next Story





